ಕರ್ತವ್ಯ ನಿರತ ಎಎಸ್​ಐಗೆ ಆಟೋ ಡಿಕ್ಕಿ; ಬ್ರೈನ್ ಡೆಡ್ ನಿಂದ ಮೃತ್ಯು

police end life
Published on

ಬೆಂಗಳೂರು: 2 ದಿನಗಳ ಹಿಂದೆ ಕರ್ತವ್ಯ ನಿರತ ಎಎಸ್‌ಐ ನಾಗರಾಜು ಅವರಿಗೆ ಬಸವೇಶ್ವರ ಸರ್ಕಲ್ ಬಳಿ ಆಟೋ ಡಿಕ್ಕಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಭಾನುವಾರ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಸರ್ಕಲ್ ಬಳಿ ರಸ್ತೆಯ ಬದಿ ನಿಂತು ಟ್ರಾಫಿಕ್‌ ದಟ್ಟಣೆಯನ್ನು ನಿಯಂತ್ರಣ ಮಾಡುತ್ತಿದ್ದ ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐಗೆ ಆಟೋ ಚಾಲಕನೊಬ್ಬ ಗುದ್ದಿದ್ದನು.

ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಗಾಯವಾಗಿದ್ದು, ಕೂಡಲೇ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಪಘಾತದ ನಂತರ ಏರ್ ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ಚಿಕಿತ್ಸೆಯ ನಂತರವೂ ಚೇತರಿಕೆ ಕಂಡುಬಂದಿರಲಿಲ್ಲ. ಇಂದು ಚಿಕಿತ್ಸೆ ಫಲಿಸದೇ ಎಎಸ್ಐ ನಾಗರಾಜ್ ಸಾವನ್ನಪ್ಪಿದ್ದಾರೆ. ನಾಗರಾಜ್‌ ಅವರ ಬ್ರೈನ್‌ ಡೆಡ್‌ ಆಗಿದ್ದು, ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬ ಸದಸ್ಯರು ನಿರ್ಧಾರ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net