ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು, ಒಬ್ಬನ ಸ್ಥಿತಿ ಚಿಂತಾಜನಕ

auto accident
Published on

ಕೊಪ್ಪಳ: ಗಂಗಾವತಿ ತಾಲೂಕಿನ ಮುಕ್ಕುಂಪಿ ಬಳಿ ಸೋಮವಾರ ಬೆಳಗ್ಗೆ ಆಟೋ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ಫಕೀರಪ್ಪ ಹೊಳೆಯಾಚೆ, ಭೀಮಣ್ಣ ಹ್ಯಾಟಿ ಹಾಗೂ ರಾಮಣ್ಣ ಡೊಳ್ಳಿ ಮೃತರು. ಮಂಜುನಾಥ ಜಬ್ಬಲಗುಡ್ಡ ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇದನ್ನೂ ಓದಿರಿ ಬರ್ತ್​ ಡೇ ಸಂಭ್ರಮದಲ್ಲಿದ್ದ ನಾಲ್ವರು ದುರಂತ ಸಾವು, ಕೇಕ್​ ಕತ್ತರಿಸಿದ ದಿನವೇ ಅಟ್ಟಹಾಸ ಮೆರೆದ ಜವರಾಯ

ಮೃತರು ಮಂಜುನಾಥ್​ರ​ ಹೊಲದಿಂದ ಶೇಂಗಾವನ್ನು ಆಟೋದಲ್ಲಿ ತುಂಬಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ವ್ಯಾಪಾರ ಮಾಡಿ ವಾಪಸ್​ ಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಕೊಪ್ಪಳ ಮಾರ್ಗದಿಂದ ಬಂದ ಲಾರಿ‌ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಪಲ್ಟಿಯಾದ ಆಟೋ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೂವರು ಪ್ರಾಣಹೋಗಿದೆ.

ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net