

ಇಳಿ ವಯಸ್ಸಿನಲ್ಲಿ ಹಾಯಾಗಿ ಇರಬೇಕು ಎಂದು ಬಯಸುವವರೇ ಹೆಚ್ಚು. ಆದರೆ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ, ಲೇಖಕಿಯಾಗಿರುವ ಮೈಸೂರಿನ ಸಿ.ಎಸ್.ಮಂಗಳಮ್ಮ ಅವರದ್ದು 95ರ ಹರೆಯ. ಆದರೂ ಬತ್ತದ ಜೀವನೋತ್ಸಾಹ. ಹಲವು ಕ್ಷೇತ್ರಗಳಲ್ಲಿ ನೈಪುಣ್ಯ ಹೊಂದಿರುವ, ಸದಾ ಲವಲವಿಕೆಯಿಂದ ಜೀವನ ಕಳೆಯುತ್ತಿರುವ, ಎಲೆಮರೆಯ ಕಾಯಿಯಾಗಿರುವ ಈ ಹಿರಿಯ ಜೀವದ ಕುರಿತು ಬರಹ ಇಲ್ಲಿದೆ.
ಮೈಸೂರಿನ ಸಿ.ಎನ್.ಮಂಗಳಮ್ಮ... ಇವರ ಬಗ್ಗೆ ಹೇಳಬೇಕೆಂದರೆ, 1925ಕ್ಕೆ ಸರಿಯಬೇಕು. ಹೆಣ್ಣು ಮಕ್ಕಳು ಶಿಕ್ಷಣ ಕಲಿಯುವುದು ದೂರದ ಮಾತು, ಮನೆಯಿಂದ ಹೊರಕ್ಕೆ ಬರುವುದನ್ನೇ ನಿರ್ಬಂಧಿಸಲಾಗಿದ್ದ ಕಾಲವದು. ಅಂಥ ಸಮಯದಲ್ಲಿಯೇ ಸಾವಿರಾರು ಮಹಿಳೆಯರಿಗೆ ಶಿಕ್ಷಣ ನೀಡಿ, ಅವರನ್ನು ಹೊಸ್ತಿಲಾಚೆ ತಂದು ಅವರ ಜೀವನಕ್ಕೆ ಅನುಕೂಲ ಮಾಡಿಕೊಟ್ಟ ಮಹಾಚೇತನ ಇವರು.
ಹೆಣ್ಣೆಂದರೆ ಶಾಲೆಯ ಮೆಟ್ಟಿಲು ಹತ್ತಬಾರದು ಎಂಬ ಗೊಡ್ಡು ಸಂಪ್ರದಾಯವನ್ನು ಮೆಟ್ಟಿನಿಂತು ಆ ಕಾಲದಲ್ಲಿಯೇ ಎಂ.ಎಗೆ ಸಮಾನವಾದ ರಾಷ್ಟ್ರಭಾಷಾ ಪ್ರವೀಣ್ ಹಿಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಂಗಳಮ್ಮನವರ ಬದುಕಿನ ಪ್ರತಿ ಕ್ಷಣವೂ ಅನುಕರಣೀಯ.
1942 ಇಡೀ ದೇಶ ಕ್ವಿಟ್ ಇಂಡಿಯಾ ಚಳವಳಿಯ ಹುರುಪಿನಲ್ಲಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಅದೆಷ್ಟೋ ಜನರು ಜೈಲು ಸೇರಿದರು. ಅಂಥವರಲ್ಲಿ ಒಬ್ಬರು ಮಂಗಳಮ್ಮ. ಈ ಕಾರಣಕ್ಕಾಗಿ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭೆಯಿಂದ (ಮದ್ರಾಸ್) ವಿಶೇಷ ಪ್ರಮಾಣ ಪತ್ರ ಕೂಡ ಇವರಿಗೆ ಸಿಕ್ಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿಕಲಾಂಗ ಬಂಧು ಎಂಬ ವಿಶೇಷ ತರಬೇತಿ ಶಿಬಿರ ನಡೆಸಿ, ಸ್ವಾಮಿ ವಿವೇಕಾನಂದ ವಿಚಾರ ಧಾರೆಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ, ಮಹಿಳಾ ಸಮಾಜದ ಶಿಶá-ವಿಹಾರ ಭಾಗದಲ್ಲಿ ಕಾರ್ಯದಶಿಯಾಗಿ, ಗರ್ಲ್ಗೈಡ್ ಸಂಸ್ಥೆಯಲ್ಲಿ ಕಾರ್ಯಕಾರಿಣಿ ಸಮಿತಿಯ ಸದಸ್ಯೆಯಾಗಿ, ಮಾಧ್ಯಮಿಕ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯೆಯಾಗಿ, ಮಂಡ್ಯ ಕರ್ನಾಟಕ ಸಾಹಿತ್ಯ ಪರಿಷತ್ ಸದಸ್ಯೆ ಯಾಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಸಂದರ್ಶಕ ಸಮಿತಿಯಲ್ಲಿ ದಶಕಗಳ ಕಾಲ ಸದಸ್ಯೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಮಂಡ್ಯದ ಆಸ್ಪತ್ರೆಯ ವಿಸಿಟರ್ಸ್ ಬೋರ್ಡ್ಗೆ ಐದು ವರ್ಷ ಎರಡು ಅವಧಿಗೆ ಅವರು ಸದಸ್ಯೆಯಾಗಿ ದುಡಿದದ್ದಲ್ಲದೇ, ಎರಡು ಶಾಲೆಗಳ ಬೆಟರ್ವೆುಂಟ್ ಕಮಿಟಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೆಣ್ಣುಮಗಳೊಬ್ಬಳು ಮುಂದಾಳತ್ವ ವಹಿಸುವುದು ಅಂದು ಅನೇಕ ಪುರುಷರಿಗೆ ಸಹಿಸದಾದ ಕಾರಣ, ಕುಟá-ಕು ಮಾತá-ಗಳನ್ನೂ ಕೇಳಬೇಕಾಗಿ ಬಂತು ಎನ್ನುವ ಮಂಗಳಮ್ಮ, ‘ರಾಮಕೃಷ್ಣ ಪರಮಹಂಸರ ಜೀವನಗಾಥೆ ಮತ್ತು ವಿಚಾರಗಳೇ ನನಗೆ ದಾರಿ ದೀಪಗಳಾಗಿದ್ದವು. ಅದೇ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ.
ಪರಮಹಂಸರನ್ನೇ ಜನ ಹುಚ್ಚರೆಂದಿದ್ದರು, ಆದರೂ ಅವರು ತಮ್ಮ ಕೆಲಸವನ್ನು ಬಿಟ್ಟರೆ?’ ಎಂದು ಪ್ರಶ್ನಿಸುತ್ತಾರೆ. ‘ಮಂಡ್ಯದಲ್ಲಿ ರಾಮಕೃಷ್ಣ ಭಾವಪ್ರಚಾರಕ್ಕಾಗಿ ಶ್ರಮಿಸಿದ ಪ್ರಥಮ ಮಹಿಳೆ ಇವರು. ಎಂಟು ವರ್ಷವಿದ್ದಾಗ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇವರಿಗೆ ಕುಮಾರಿ ಪೂಜೆಯನ್ನು ನೇರವೇರಿಸಿದ್ದರು. ಅಲ್ಲಿ ಪರಿಚಯವಾದ ಮಹಾರಾಣಿ ಪ್ರತಾಪರುದ್ರ ದೇವಿ ಮಹಿಳಾ ಸಬಲೀಕರಣ ಬಗ್ಗೆ ಧೈರ್ಯ ತುಂಬá-ತ್ತಿದ್ದರು. ಅವರ ಸ್ಪೂರ್ತಿಯ ಮಾತá-ಗಳೇ ಪ್ರೇರಣೆಯಾಯಿತು’ ಎನ್ನುತ್ತಾರೆ.
ಅಗಾಧ ನೆನಪಿನ ಶಕ್ತಿ: ಮಂಗಳಮ್ಮ ಅವರದ್ದು ಅಗಾಧ ನೆನಪಿನ ಶಕ್ತಿ. 95 ವರ್ಷವಾದರೂ ಹಿಂದಿನ ಘಟನೆಗಳನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತಾರೆ. ಸಂದರ್ಭ, ಪರಿಸ್ಥಿತಿಯನ್ನು ಸರಿಯಾಗಿ ಹೇಳá-ತ್ತಾರೆ. ವ್ಯಕ್ತಿಯನ್ನು ಸರಿಯಾಗಿ ಗುರá-ತಿಸá-ತ್ತಾರೆ. ಅಲ್ಲದೆ ಮಂಗಳಮ್ಮ ಅವರದ್ದು, ಗಮಕ ವ್ಯಾಖ್ಯಾನ ಮತ್ತು ಉಪನ್ಯಾಸಗಳಲ್ಲೂ ಎತ್ತಿದ ಕೈ. ಇಂದಿಗೂ ಮಂಗಳಮ್ಮ ಒರಗುದಿಂಬುಗಳ ಆಧಾರವಿಲ್ಲದೆ ನೆಟ್ಟಗೆ ಕೂರುತ್ತಾರೆ. ವಯೋಸಹಜ ಕಾಯಿಲೆಗಳೂ ಇವರನ್ನು ಬಾಧಿಸಿಲ್ಲ. ಆಧುನಿಕತೆಗೂ ಒಗ್ಗಿಕೊಂಡಿರುವ ಇವರು, ಕಂಪ್ಯೂಟರ್ ಮುಂದೆ ಕುಳಿತು ಇಮೇಲ್ ಪತ್ರಗಳನ್ನು ಓದುತ್ತಾರೆ. ಮಗ ನರಹರಿಯವರ ನೆರವನ್ನು ಪಡೆದು ಪತ್ರಗಳಿಗೂ ಉತ್ತರಿಸುತ್ತಾರೆ.
ಹಲವು ಪುಸ್ತಕಗಳ ಲೇಖಕಿ: ಶ್ರೀ ಶಾರದಾದೇವಿ ಚರಿತೆ
(ಪದ್ಯರೂಪ), ವಿಶ್ವ ಪ್ರಿಯ ಸನ್ಯಾಸಿ ಸ್ವಾಮಿರಂಗನಾಥಾನಂದ (ಜೀವನಚರಿತ್ರೆ), ಮುರá-ಳಮá-ನಿಯನಕಗ್ಗ-ಸರಳವಿವರಣೆ, ಮಹಾಭಾರತ ಕಥಾ ಸಂಗ್ರಹ, ಚಿಂತನಧಾರೆ (ಬಿಡಿ ಲೇಖನಗಳು), ನುಡಿ ನಮನ ಮತ್ತು ತೋಚಿದ್ದು, ಗೀಚಿದ್ದು (ಕವಿತೆಗಳು ಹಾಗೂ ಚಟá-ಕá-ಗಳು , ಸ್ವಸ್ಥ ಬದá-ಕಿಗೆ ಭಗವದ್ಗೀತೆ ಮತ್ತು ಸಹಸ್ರರಣ (ಸನ್ನುಡಿಗಳá-) ರಾಮಾಯಣದಲ್ಲಿನ
ಪ್ರಮá-ಖ ಸೋದರರು, ವನಪರ್ವದಲ್ಲಿನ ನೀತಿಕತೆಗಳು, ಬೆಳಕಿಂಡಿ ಮತ್ತು ತೋಚಿದ್ದು, ಗೀಚಿದ್ದು, ದಿವ್ಯ ಶಿಕ್ಷಣದೀವಿಗೆ ಶ್ರೀಮಾತೆ, ಭವ್ಯ ಜೀವನದ ಇಣá-ಕು ನೋಟ ( ಬಿಡಿ ಬರಹಗಳು), ಸ್ವಾಸ್ಥ್ಯ ಮತ್ತು ಸಂಪತ್ತು, ಸರಳತೆಯಲ್ಲಿ ಬೆಳಗಿದ ದಿವ್ಯತೆ - ಶ್ರೀಮಾತೆ ಮುಂತಾದವು. ಇನ್ನೂ ಅನೇಕ ಪುಸ್ತಕಗಳು ಬಿಡುಗಡೆಗೆ ಸಿದ್ಧಗೊಂಡಿವೆ.
ನವೀನ್ಕುಮಾರ್ ಎಚ್.ಪಿ.