ವಾರ ಭವಿಷ್ಯ: ಈ ರಾಶಿಯವರಿಗೆ ಫಲ ಕೊಟ್ಟು ಗ್ರಹಗಳು ಅನುಕೂಲ ಮಾಡಿಕೊಡಲಿವೆ

VARA BHAVISHYA
Published on
ಮೇಷ: ಸೂರ್ಯ ಸಿದ್ಧಾಂತದ ಪ್ರಕಾರವಾಗಿ ಭಾನುವಾರವೇ ಮೇಷ ರಾಶಿಗೆ ಸೂರ್ಯನು ಬಂದು, ಹೊಸ ವರ್ಷವು ಆರಂಭವಾಗುತ್ತದೆ. ಸೂರ್ಯ ಸಿದ್ಧಾಂತದಲ್ಲಿ ಕೂಡ ಸೂರ್ಯನೇ ಈ ಸಂವತ್ಸರದ ರಾಜನಾಗಿರುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ರಾಶಿಗೆ ಸೂರ್ಯನು ಬಂದು ಇಷ್ಟಾರ್ಥ ಈಡೇರಿಸುತ್ತಾನೆ. ಆದರೆ ಸೂರ್ಯನಿಗೆ ಮತ್ತು ರಾಶಿಯ ಅಧಿಪತಿ ಕುಜನಿಗೆ ಈ ಇಬ್ಬರಿಗೂ ಸೂರ್ಯನ ಪ್ರಾರ್ಥನೆ ಹಾಗೂ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಲೇಬೇಕು.

ವೃಷಭ : ವೃಷಭ ರಾಶಿಯಲ್ಲಿ ಸೂರ್ಯನು ದ್ವಾದಶಕ್ಕೆ ಬಂದು ಏಕಾದಶದಲ್ಲಿ ರಾಹುವಿರುತ್ತಾನೆ. ಒಲವನ್ನು ಕುಗ್ಗಿಸಿ, ಬಲಹೀನನನ್ನಾಗಿಸಿದಾಗ, ದೈವಬಲವನ್ನು ಸಂಪಾದಿಸಿಕೊಳ್ಳಬೇಕು. ಶ್ರಮಪಡಬೇಕು. ಆದರೆ ಬುಧ, ಶನಿ, ಶುಕ್ರ ರಾಹು-ಮೀನ ರಾಶಿಯಲ್ಲಿ ಇದ್ದು ನಿಮ್ಮ ಭಾಗ್ಯೋದಯದ ಕಾಲ ಹತ್ತಿರದಲ್ಲಿದೆ. ಆರೋಗ್ಯದ ಕಡೆಗೆ ಲಕ್ಷ್ಯವಿರಲಿ, ಸೂರ್ಯನ ಪ್ರಾರ್ಥನೆ ಇರಲಿ. ಈ ಮಾಸದಲ್ಲಿ ವೃಷಭ ವಾಹನಾರೂಢನಾದ ಶಿವನನ್ನು ಪ್ರಾರ್ಥಿಸಿ, ಪೂಜಿಸಿ.

ಮಿಥುನ : ಮಿಥುನ ರಾಶಿಗೆ ಏಕಾದಶಕ್ಕೆ ಸೂರ್ಯನು ಬರುವುದು ಒಳ್ಳೆಯ ವಿಷಯವೇ. ದ್ವಾದಶದಲ್ಲಿ ಗುರುವಿದ್ದು, ಗುರು ಪ್ರೀತ್ಯರ್ಥವಾಗಿ ಆದಿತ್ಯಾತ್ಮಕ ಶ್ರೀರುದ್ರನನ್ನು ಪೂಜಿಸಿ. ಗುರುಬಲವು ಹೆಚ್ಚಾಗಿ ನಿಮ್ಮ ಕೆಲಸಗಳಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಕಾಣಬಹುದು. ಚೈತ್ರ ಮಾಸದ ದೇವತೆಯಾದ ಶ್ರೀ ರಾಮಚಂದ್ರನನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ.

ಕಟಕ : ಕಟಕ ರಾಶಿಗೆಯವರಿಗೆ 9 ರ ಶನಿ, ಏಕಾದಶದ ಗುರು ಮುಂದುವರಿದಿದ್ದಾರೆ. ಅನೇಕ ಕೆಲಸಗಳಲ್ಲಿ ಚಿಂತಿತ ಫಲ ಕೊಟ್ಟು ಗ್ರಹಗಳು ನಿಮಗೆ ಅನುಕೂಲ ಮಾಡಿಕೊಡುವುದಲ್ಲದೆ ನಿಮಗೆ ದೇಹ ಸೌಖ್ಯ ಕೊಡುತ್ತಾರೆ. ಹರಿಹರರ ಚಿಂತನೆ ಸದಾ ಇರಲಿ. ಉಮಾ ಮಹೇಶ್ವರನನ್ನು ಪೂಜಿಸಿ.

ಸಿಂಹ : ಸಿಂಹ ರಾಶಿಯವರು ಸತ್ಯ ಸಂಕಲ್ಪರು. ಸಮಯ ಪ್ರಜ್ಞೆ ಇರುವವರು. ಅವರು ಸದಾಕಾಲ ಏನು ಮಾಡಬೇಕೆಂಬುದನ್ನು ಚಿಂತಿಸುತ್ತ ಇರುತ್ತಾರೆ. ಗುರುಬಲ ಮತ್ತು ಶನಿಬಲ ಇಲ್ಲದಿದ್ದರೂ ದೈವವೇ ನಿಮ್ಮ ಬದುಕಿಗೆ ದಾರಿ ತೋರುತ್ತದೆ. ಪ್ರತಿನಿತ್ಯ ತಪ್ಪದೆ ಆದಿತ್ಯ ಹೃದಯ ಪಾರಾಯಣ ಮಾಡಿರಿ.

ಕನ್ಯಾ: ಶನಿಯು ಸಪ್ತಮಕ್ಕೆ ಬಂದಿದ್ದಾನೆ. ಆದ್ದರಿಂದ ಕನ್ಯಾ ರಾಶಿಯವರು ಗುರುವಿನ ಏಕಬಲದಿಂದ ಮಾತ್ರವೇ ಮುಂದೆ ಸಾಗಬೇಕು. ಕರ್ತವ್ಯಪ್ರಜ್ಞೆ, ಸಮಯಪ್ರಜ್ಞೆ, ಇದ್ದರೆ ಮಾತ್ರ ನಿಶ್ಚಿತ ಗುರಿಯತ್ತ ಮುಂದೆ ಸಾಗಬಲ್ಲಿರಿ. ಹನುಮಂತ ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ. ನಿಮ್ಮ ದಾರಿಯನ್ನು ಸುಗಮ ಮಾಡಿ ಕಾಪಾಡುತ್ತಾನೆ.

ತುಲಾ: ದೈವಕ್ಕೆ ದೈವಬಲವೇ ಸಾಕ್ಷಿ. ಬುದ್ಧಿಗೆ ಸರಸ್ವತಿಯೇ ಆಧಾರ. ದೇವರೇ ಮಹಾ ಸಂಕಲ್ಪವನ್ನು ಹೂಡಿ ಅವನೇ ಗುರಿ ಮುಟ್ಟುವಂತೆ ಮಾಡುತ್ತಾನೆ. ದೈವವನ್ನು ನಂಬಿದರೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ನಿಮ್ಮ ಪ್ರೀತಿಯ ದೇವರನ್ನು, ಕುಲದೇವರನ್ನು ಪೂಜಿಸಿ, ಹಿರಿಯರನ್ನು ಗೌರವಿಸಿ. ನಿಮ್ಮ ಕೆಲಸಗಳು ತನ್ನಿಂದ ತಾನೇ ನೆರವೇರುತ್ತವೆ.

ವೃಶ್ಚಿಕ : ಈ ರಾಶಿಯವರಿಗೆ ಪಂಚಮ ಶನಿ ಆರಂಭವಾಗಿದೆ. ಸಪ್ತಮದಲ್ಲೇ ಗುರುವಿರುವುದರಿಂದ ನಿಮ್ಮ ಸಂಕಲ್ಪವನ್ನು ಯಾರೂ ಮುರಿಯಲು ಆಗುವುದಿಲ್ಲ. ಆದರೂ ಕೊಡುವ ದೇವರೇ ಕಾಪಾಡಬೇಕು. ಹಾಗೂ ನಿಮ್ಮ ಧನವೃದ್ಧಿ ಮಾಡಿಕೊಳ್ಳಲು ಗುರುಕೃಪೆಯನ್ನು ಪಡೆದು ಮುಂದೆ ಸಾಗಿರಿ.

ಧನು : ಧನು ರಾಶಿಗೆ ಸಪ್ತಮದಲ್ಲಿ ಗುರು ಬರುವವರೆಗೂ ಕಾಯಲೇಬೇಕು. ಶನಿ ಚತುರ್ಥದಲ್ಲಿದ್ದಾನೆ. ಆದ್ದರಿಂದ ಏನೇ ಮಾಡಬೇಕಾದರೂ, ಯೋಚನೆ ಮಾಡಿ. ನಿಮ್ಮ ಸ್ಥಾನ-ಮಾನ ಉಳಿಸಿಕೊಳ್ಳಿ. ನಿಮಗೆ ಅದೇ ಶ್ರೇಯಸ್ಸು. ಒಳ್ಳೆದಾಗುತ್ತದೆ. ದುಡ್ಡಿನ ವ್ಯವಹಾರದಲ್ಲಿ ದಯವೂ ಸಿಕ್ಕೇ ಸಿಗುತ್ತದೆ.

ಮಕರ : ಮಕರ ರಾಶಿಯವರು ಮಧುರ ಭಾಷಿಣಿ ಮಂಜುಳಾದೇವಿಯನ್ನು ಪೂಜಿಸಿ. ನಾಲಿಗೆಯನ್ನು ಹತೋಟಿಯಲ್ಲಿಟ್ಟು, ಒಲವಿನಿಂದ, ಮಧುರ ಭಾಷೆಯಿಂದ ಮಾತನಾಡಿದರೆ, ಕೆಲಸಗಳು ಸುಲಲಿತವಾಗಿ ಸಾಗುತ್ತವೆ. ನಿಮ್ಮ ಮಾತಿನ ಶಕ್ತಿಯಿಂದ, ಯುಕ್ತಿಯಿಂದ ಮಾಡುವ ಕೆಲಸಗಳಿಗೆ ದೈವಾನುಗ್ರಹವಿದೆ.

ಕುಂಭ : ಕುಂಭ ರಾಶಿಯನ್ನು ಶನಿ ಬಿಟ್ಟು ದ್ವಿತೀಯಕ್ಕೆ ಬಂದಿದ್ದಾನೆ. ಗುರುವಿನ ಮನೆಯಾದರೂ, ಶನಿಯು ಗುರುವಿನ ಮನೆಯಲ್ಲೂ ಆಧಿಪತ್ಯ ನಡೆಸುತ್ತಾನೆ. ನಿಮ್ಮ ಪ್ರಾರ್ಥನೆ-ಪೂಜೆಯೂ ಬೇಕಾಗುತ್ತದೆ. ಶನಿ ಸಂಚಾರದಲ್ಲಿ ಅನಂತವಾಗಿ ಮಹಾವಿಷ್ಣುವನ್ನು ಪೂಜಿಸಿ. ಲಕ್ಷ್ಮೀ ನರಸಿಂಹನನ್ನು ಆರಾಧಿಸಿ. ಒಳ್ಳೆಯ ದಿನಗಳನ್ನು ಕಂಡುಕೊಳ್ಳಬಹುದು. ಶನಿಯು ದ್ವಿತೀಯಕ್ಕೆ ಬಂದಿರುವುದರಿಂದ ಪ್ರಯತ್ನವು ಜಾಸ್ತಿಯಿರಬೇಕು.

ಮೀನ: ಗುರುವೇ ರಾಶಿಯ ಚಕ್ರದಲ್ಲಿ ಭಾಗ್ಯ ಕೊಡುವವನು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ. ಗುರುವೇ ಶಿವನು, ವಿಷ್ಣುವು. ಎಲ್ಲವೂ ಗುರು ಸ್ವರೂಪವೇ. ಮನೆಯಲ್ಲೇ ತಂದೆ-ತಾಯಿಯನ್ನು ಪೂಜಿಸಿ ಆರಾಧಿಸಲು ಮರೆಯದಿರಿ. ಶನಿ ಸಂಚಾರವು ಇರುವುದರಿಂದ ನಿತ್ಯ ಒಂದು ಅಧ್ಯಾಯದಂತೆ ಗುರು ಚರಿತ್ರೆ ಪಾರಾಯಣ ಮಾಡಿ. ಸಂಕಟ ಪರಿಹಾರಕ್ಕೆ 14ನೇ ಅಧ್ಯಾಯ ಪ್ರತಿನಿತ್ಯ ಪಾರಾಯಣ ಮಾಡಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net