ಭಾರತೀಯ ಮೂಲದ ಬಾಣಸಿಗನನ್ನು ವರಿಸಿದ್ದ ಆಸ್ಟ್ರೀಯಾದ ರಾಜಕುಮಾರಿ ನಿಧನ

princess
Published on

ನವದೆಹಲಿ: ಭಾರತೀಯ ಮೂಲದ ಬಾಣಸಿಗ ರಿಷಿ ರೂಪ್​ ಸಿಂಗ್ ಅವರನ್ನು ವಿವಾಹವಾಗಿದ್ದ ಆಸ್ಟ್ರೀಯಾದ ರಾಜಕುಮಾರಿ ಮರಿಯಾ ಗಲಿಟಿಜೈನ್ (31) ಟೆಕ್ಸಾಸ್​ನ ಹೂಸ್ಟನ್​ನಲ್ಲಿ ಹಠಾತ್ ನಿಧನರಾಗಿದ್ದಾರೆ. ಹೃದಯಸ್ತಂಭನದಿಂದ ಅವರು ಮೃತಪಟ್ಟಿದ್ದಾಗಿ ಹೇಳಲಾಗಿದೆ.

ರಾಣಿ ಮರಿಯಾ - ಅನ್ನಾ ಹಾಗೂ ರಾಜ ಪಿಯೋಟರ್ ಗಲಿಟ್​ಜೈನ್ ಪುತ್ರಿ ಮರಿಯಾ ತಮ್ಮ 32 ನೇ ಹುಟ್ಟು ಹಬ್ಬದ ಆಚರಣೆಗೆ ಆರು ದಿನ ಇರುವಂತೆ ನಿಧನರಾಗಿದ್ದಾರೆ. ಪತಿ, ಎರಡು ವರ್ಷದ ಪುತ್ರ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ,

1988ರಲ್ಲಿ ಲಕ್ಸಂಬರ್ಗ್​ನಲ್ಲಿ ಜನಿಸಿದ್ದ ಮರಿಯಾ ಐದು ವರ್ಷದವರಿರುವಾಗಲೇ ರಷ್ಯಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು.

ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಗಾರ್ತಿಯಾಗಿದ್ದ ಮರಿಯಾ ಹ್ಯೂಸ್ಟನ್ ನಲ್ಲಿ ರೂಪ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ, ಮದುವೆಯೂ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net