16 ಕೋಟಿ ರೂ. ಮೌಲ್ಯದ ಕಲಾಕೃತಿಗಳು ಭಾರತಕ್ಕೆ ವಾಪಸ್​!

aus
Published on

ಸಿಡ್ನಿ : ಭಾರತಕ್ಕೆ ಸೇರಿದವೆನ್ನಲಾದ ಸುಮಾರು 16 ಕೋಟಿ ರೂಪಾಯಿ ಬೆಲೆ ಬಾಳುವ 14 ಕಲಾಕೃತಿಗಳನ್ನು ಹಿಂದುರಿಗಿಸಲಾಗುವುದೆಂದು ಆಸ್ಟ್ರೇಲಿಯದ ರಾಷ್ಟ್ರೀಯ ಮ್ಯೂಸಿಯಂ ಹೇಳಿದೆ. ಹಾಲಿ ನ್ಯಾಷನಲ್ ಗ್ಯಾಲರಿ ಆಫ್​ ಆಸ್ಟ್ರೇಲಿಯದಲ್ಲಿರುವ ಈ ಕಲಾಕೃತಿಗಳಲ್ಲಿ ಕನಿಷ್ಠ ಆರು ಕಲಾಕೃತಿಗಳು ಕಳವು ಮಾಡಲ್ಪಟ್ಟವಾಗಿವೆ ಎನ್ನಲಾಗಿದೆ.

ಗ್ಯಾಲರಿಯ ಏಷಿಯನ್ ಆರ್ಟ್​ ಕಲೆಕ್ಷನ್​ ವಿಭಾಗದಲ್ಲಿಡಲಾಗಿದ್ದ ಈ ಶಿಲ್ಪಗಳು, ಫೋಟೋಗಳು ಮತ್ತು ಒಂದು ಸ್ಕ್ರಾಲ್​ಅನ್ನು ಬಹುತೇಕವಾಗಿ ಕಳ್ಳಸಾಗಣೆಯ ಆರೋಪ ಎದುರಿಸುತ್ತಿರುವ ಅಮೆರಿಕದ ಸುಭಾಷ್​ ಕಪೂರ್ ಎಂಬ ಡೀಲರ್​ನಿಂದ ಖರೀದಿಸಲಾಗಿತ್ತು ಎನ್ನಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ಕಲಾಕೃತಿಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಗ್ಯಾಲರಿ ನಿರ್ದೇಶಕ ನಿಕ್​ ಮಿಟ್ಜೆವಿಕ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net