

Aurangzeb: ಮಹಾರಾಷ್ಟ್ರದ ಖುಲ್ದಾಬಾದ್‌ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ನಾಶಮಾಡಬೇಕೆಂದು ಶಿವಸೇನಾ ಸಂಸದ ನರೇಶ್ ಮಸ್ಕೆ ಬುಧವಾರ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮ್ಹಾಸ್ಕೆ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಸಂರಕ್ಷಿಸಿರುವ 3,691 ಸ್ಮಾರಕಗಳು ಮತ್ತು ಸಮಾಧಿಗಳಲ್ಲಿ, ಶೇಕಡಾ 25 ರಷ್ಟು "ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ ಮೊಘಲ್ ಮತ್ತು ಬ್ರಿಟಿಷ್ ಅಧಿಕಾರಿಗಳದ್ದಾಗಿವೆ'' ಎಂದು ಹೇಳಿದ್ದಾರೆ.
ಔರಂಗಜೇಬನು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಹಿಂದುಗಳನ್ನು ಕ್ರೂರವಾಗಿ ಕೊಂದಿದ್ದಾನೆ. ಅಲ್ಲದೆ, ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ್ದಾನೆ ಎಂದು ಮಾಸ್ಕೆ ಹೇಳಿದ್ದಾರೆ.
ಒಂಬತ್ತನೇ ಮತ್ತು ಹತ್ತನೇ ಸಿಖ್ ಗುರುಗಳನ್ನು ಕೊಂದ ಔರಂಗಜೇಬನನ್ನು ಖುಲ್ದಾಬಾದ್‌ನ ಸಮಾಧಿಯಲ್ಲಿ ಸಮಾಧಿ ಮಾಡಲಾಗಿದೆ, ಇದನ್ನು ಎಎಸ್‌ಐ ರಕ್ಷಿಸುತ್ತದೆ ಎಂದಿದ್ದಾರೆ.
ಔರಂಗಜೇಬನಂತಹ ಕ್ರೂರಿಯೊಬ್ಬರ ಸ್ಮಾರಕವನ್ನು ಸಂರಕ್ಷಿಸುವ ಅಗತ್ಯವೇನು?. ಔರಂಗಜೇಬ ಮತ್ತು ಭಾರತದ ವಿರುದ್ಧ ಕೆಲಸ ಮಾಡಿದ ಪ್ರತಿಯೊಬ್ಬರ ಸ್ಮಾರಕಗಳನ್ನು ನಾಶಪಡಿಸಬೇಕು" ಎಂದು ಮಾಸ್ಕೆ ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)