ನಯನತಾರಾಗೆ ಆಗಸ್ಟ್ ಧಮಾಕಾ : 15 ದಿನಗಳ ಅಂತರದಲ್ಲಿ ನಟಿಯ ಎರಡು ಸಿನಿಮಾಗಳು ರಿಲೀಸ್

ನಯನತಾರಾ
ನಯನತಾರಾ
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ ನಲ್ಲಿ ನಟಿಯ ಹಾಯ್, ಟಾಕ್ಸಿಕ್ ರಿಲೀಸ್​
  • ಎರಡೂ ಚಿತ್ರಗಳ ಪ್ರಚಾರದ ಕೆಲಸಗಳಲ್ಲಿ ಬಿಜಿಯಾದ ನಟಿ
  • ಈ ಹಿಂದೆಯೂ ನಟಿಯ ಒಂದೇ ತಿಂಗಳಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿದ್ದ ಉದಾಹರಣೆಗಳಿವೆ
ಬಹುಭಾಷಾ ತಾರೆ ನಯನತಾರಾಗೆ ಆಗಸ್ಟ್ ತಿಂಗಳು ಡಬಲ್ ಧಮಾಕಾ. ಯಾಕೆಂದರೆ ನಟಿಯ ಎರಡು ಸಿನಿಮಾಗಳು ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿವೆ. ಹೌದು, ಸದ್ಯ ಕನ್ನಡ ಸೇರಿ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ನಯನತಾರಾ ಬಿಜಿಯಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಭರ್ತಿ 8 ಸಿನಿಮಾಗಳಿದ್ದು, ಕನಿಷ್ಟ 4 ಚಿತ್ರಗಳು ರಿಲೀಸ್‌ಗೆ ಸಿದ್ಧವಾಗಿವೆ. ಅದರಲ್ಲಿ ಎರಡು ಚಿತ್ರಗಳು ಮುಂದಿನ ತಿಂಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗುತ್ತಿವೆ. ನಯನತಾರಾ ಮತ್ತು ಕೆವಿನ್ ಮುಖ್ಯಭೂಮಿಕೆಯಲ್ಲಿರುವ ತಮಿಳಿನ ‘ಹಾಯ್’ ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿ, ರಿಲೀಸ್‌ಗೆ ಸಿದ್ಧವಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದರಂತೆ, ಆಗಸ್ಟ್ 14ರಂದು ತೆರೆ ಮೇಲೆ ಬರಲಿದೆ. ಕಾಕತಾಳೀಯ ಎಂಬಂತೆ, ನಯನತಾರಾ ತಾರಾಗಣದಲ್ಲಿರುವ ಬಹುನಿರೀಕ್ಷಿತ ಕನ್ನಡದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಕೂಡ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ಆ ಮೂಲಕ ಒಂದೇ ತಿಂಗಳಲ್ಲಿ ಅದರಲ್ಲೂ 15 ದಿನಗಳ ಅಂತರದಲ್ಲಿ ನಟಿಯ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಅವರು ಸದ್ಯ ಈ ಎರಡೂ ಚಿತ್ರಗಳ ಪ್ರಚಾರದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಉಳಿದಂತೆ ನಯನತಾರಾ ಸಲ್ಮಾನ್ ಖಾನ್ ಅಭಿನಯದ ಸಿನಿಮಾದ ಶೂಟಿಂಗ್ ನಡೆಸುತ್ತಿದ್ದಾರೆ. -ಏಜೆನ್ಸೀಸ್

ಇದೇ ಮೊದಲಲ್ಲ...

ಹಾಗಂತ ನಯನತಾರಾ ಅಭಿನಯದ ಎರಡು ಸಿನಿಮಾಗಳು ಕೆಲವೇ ದಿನಗಳ ಅಂತರದಲ್ಲಿ ಬಿಡುಗಡೆಯಾಗಿರುವುದು ಇದೇ ಮೊದಲೇನಲ್ಲ. ಇದುವರೆಗೆ 75ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ನಯನತಾರಾ ಅವರ ‘ಜವಾನ್’ ಮತ್ತು ‘ಇರೈವಾನ್’ ಚಿತ್ರಗಳು 2023ರ ಡಿಸೆಂಬರ್‌ನಲ್ಲಿ, ‘ಗೋಲ್ಡ್’ ಮತ್ತು ‘ಕನೆಕ್ಟ್’ ಸಿನಿಮಾಗಳು 2022ರ ಡಿಸೆಂಬರ್‌ನಲ್ಲಿ, ‘ಸೈರಾ ನರಸಿಂಹ ರೆಡ್ಡಿ’ ಮತ್ತು ‘ಬಿಗಿಲ್’ ಸಿನಿಮಾಗಳು 2019ರ ಅಕ್ಟೋಬರ್‌ನಲ್ಲಿ, ‘ಇಮೈಕ್ಕಾ ನೋಡಿಗಳ್’ ಮತ್ತು ‘ಕೊಲಮಾವು ಕೋಕಿ’ ಚಿತ್ರಗಳು 2018ರ ಆಗಸ್ಟ್‌ನಲ್ಲಿ, ‘ತಿರುನಾಲ್’ ಮತ್ತು ‘ಬಾಬು ಬಂಗಾರಂ’ ಸಿನಿಮಾಗಳು 2017ರ ಆಗಸ್ಟ್‌ನಲ್ಲಿ, ‘ಮಾಯ’ ಮತ್ತು ‘ಲೈಫ್​ ಆಫ್ ಜೋಸುಟ್ಟಿ’ ಚಿತ್ರಗಳು 2015ರ ಸೆಪ್ಟೆಂಬರ್.. . ಹೀಗೆ ಹಲವು ಸಿನಿಮಾಗಳು ಒಂದೇ ತಿಂಗಳಲ್ಲಿ ಕೆಲವೇ ದಿನಗಳ ಅಂತರದಲ್ಲಿ ರಿಲೀಸ್ ಆಗಿರುವುದು ವಿಶೇಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net