ನಾಪೋಕ್ಲು ಗ್ರಾಪಂ ಮಳಿಗೆಗೆಗಳ ಹರಾಜು

6.npk-1
ನಾಪೋಕ್ಲು ಗ್ರಾಮ ಪಂಚಾಯಿತಿಯ 2024-25ರ ಸಾಲಿನ ಬಹಿರಂಗ ಹರಾಜು ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
Published on

ನಾಪೋಕ್ಲು: ಗ್ರಾಮ ಪಂಚಾಯಿತಿಯ 2024-25ರ ಸಾಲಿನ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.

ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಹಿರಂಗ ಹರಾಜು ಪಕ್ರಿಯೆ ಕುರಿತು ಮಾಹಿತಿ ನೀಡಿದ ಅವರು, ಮಾರುಕಟ್ಟೆ 19,07,470 ರೂ., ವಾಹನ ಶುಲ್ಕ 3,12,700 ರೂ. ಗಳಿಗೆ, ಹಸಿ ಮೀನು ಒಂದನೇ ಮಳಿಗೆ 3,56,006 ರೂ., ಎರಡನೇ ಮಳಿಗೆ 3,26,978 ರೂ., 1ನೇ ಕುರಿಮಾಂಸ ಮಳಿಗೆ 1,72,280 ರೂ. 2ನೇ ಮಳಿಗೆ 1,72,162 ರೂ., ಕೋಳಿ ಮಾಂಸದ ಆರು ಮಳಿಗೆಗಳ ಪೈಕಿ ನಾಲ್ಕು ಮಳಿಗೆಗಳು ತಲಾ 78,116 ರೂ. ಗಳಿಗೆ ಹರಾಜಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಂಗಂಡ ಶಶಿ ಮಂದಣ್ಣ ಹಾಗೂ ಸದಸ್ಯರು ಮತ್ತು ಪಿಡಿಒ ಚೊಂದಕ್ಕಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net