

ವಿಜಯವಾಣಿ ಸುದ್ದಿಜಾಲ ಗುಬ್ಬಿ
ಬರಗಾಲದಿಂದ ತತ್ತರಿಸಿರುವ ರೈತರಿಂದ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್ಗಳು ಸಾಲ ವಸೂಲಾತಿಯ ನೆಪದಲ್ಲಿ ರೈತರ ಜಮೀನು ಹರಾಜು ಹಾಕಲು ಮುಂದಾಗಿರುವುದು ಖಂಡನೀಯ ಎಂದು ರೈತ ಸಂದ ತಾಲೂಕು ಅಧ್ಯ ವೆಂಕಟೇಗೌಡ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಬೆಳೆಗಳಿಗೆ ಬೆಲೆ ನಿಗದಿಯಾಗದೆ ಸಂಕಷ್ಟದಲ್ಲಿದ್ದಾರೆ. ಕೊಬ್ಬರಿ ಬೆಲೆ ಕುಸಿದು, ತೆಂಗಿನ ಬೆಳೆಗೆ ರೋಗ ಹರಡಿದ್ದರಿಂದ ರೈತರು ಕಂಗಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ರೈತರನ್ನು ಬ್ಯಾಂಕ್ಗಳು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂದರು. ಬ್ಯಾಂಕಿನವರು ರೈತರಿಗೆ ನೀಡಿರುವ ಸಾಲಕ್ಕಿಂತ ಹೆಚ್ಚಾಗಿ ಹಣ ವಸೂಲಿ ಮಾಡುವ ಉದ್ದೇಶದಿಂದ ಕೋರ್ಟ್ ಆದೇಶ ಪಡೆದುಕೊಂಡು ರೈತರ ಜಮೀನು ಹರಾಜು ಮಾಡಿರುವುದರ ವಿರುದ್ಧ ಆ.12ರಂದು ತುರುವೇಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ತುರುವೇಕೆರೆ ತಾಲೂಕಿನ ರೈತ ಪಡೆದಿದ್ದ 4.5 ಲಕ್ಕೆ ಬದಲಾಗಿ 35 ಲ ನೀಡುವಂತೆ ನ್ಯಾಯಾಲಯದ ಡಿಗ್ರಿ ಮಾಡಿಸಿಕೊಂಡು ಅಪಾರ ಬೆಲೆ ಬಾಳುವ ಜಮೀನನ್ನು ಕಡಿಮೆ ಬೆಲೆಗೆ ಹರಾಜು ಹಾಕಿದ್ದಾರೆ. ಇದರಿಂದ ರೈತ ಕುಟುಂಬ ಬೀದಿಗೆ ಬಂದಿದೆ. ಇದನ್ನು ಖಂಡಿಸಿ ತುರುವೇಕೆರೆ ಖಾಸಗಿ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಮಧ್ಯಪ್ರವೇಶ ಮಾಡಿ ರೈತರ ಸಹಕಾರಕ್ಕೆ ನಿಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರೈತ ಸಂದ ತಾಲೂಕು ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಶ್ರೀಮಂತರಿಂದ ಸಾಲ ವಸೂಲು ಮಾಡದೆ ಸುಮ್ಮನಿರುವ ಬ್ಯಾಂಕ್ಗಳು, ಬಡರೈತರ ಜಮೀನುಗಳನ್ನು ಹರಾಜು ಹಾಕಲು ಮುಂದಾಗಿರುವುದು ದುರಾದೃಷ್ಟಕರ. ಕಾರ್ಪೊರೇಟ್ ಸಂಸ್ಥೆಯವರ ಸಾಲಮನ್ನಾ ಮಾಡಲು ಆಸಕ್ತಿತೋರುವ ಸರ್ಕಾರಗಳು ರೈತರ ಸಾಲವನ್ನೇಕೆ ಮನ್ನಾಮಾಡುತ್ತಿಲ್ಲ ಎಂದು ಕಿಡಿಕಾರಿದರು. ರೈತ ಸಂದ ತಾಲೂಕು ಯುವಟಕದ ಅಧ್ಯ ಶಿವಕುಮಾರ್ ಮಾತನಾಡಿ, ರೈತರು ಎಂದಿಗೂ ಸುಸ್ತಿದಾರರಾಗಲು ಇಷ್ಟಪಡುವುದಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಂಡು ಬ್ಯಾಂಕ್ಗಳು ನ್ಯಾಯಾಲಯದಲ್ಲಿ ಅವರಿಗೆ ಇಷ್ಟ ಬಂದಂತೆ ಆದೇಶ ಮಾಡಿಸಿಕೊಂಡು ಜಮೀನು, ಮನೆಗಳನ್ನು ಹರಾಜು ಹಾಕಲು ಮುಂದಾಗುತ್ತಿದ್ದಾರೆ ಎಂಧು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತುರುವೇಕೆರೆಯಲ್ಲಿ ನಡೆಯಲಿರುವ ಪ್ರತಿಭಟನೆಯ ಕರಪತ್ರ ಬಿಡುಗಡೆಗೊಳಿಸಿದರು.