

ಭದ್ರಾವತಿ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಧನಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.
50 ರೂ., 100 ರೂ., 200 ರೂ. ಸೇರಿದಂತೆ ವಿವಿಧ ಮುಖಬೆಲೆ ನೋಟುಗಳಿಂದ ದೇವಿ ಸುತ್ತ ಅಲಂಕಾರ ಮಾಡಿರುವುದು ಆಕರ್ಷಣೀಯವಾಗಿದೆ. ಕಮಲದ ಹೂವಿನೊಳಗೆ ಕುಳಿತು ಒಡವೆ ವಸ್ತ್ರಗಳಿಂದ ವರ್ಣರಂಜಿತ ಅಲಂಕಾರಿಣಿಯಾಗಿದ್ದ ಶ್ರೀ ಬನಶಂಕರಿ ದೇವಿಯನ್ನು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ರಸಮಂಜರಿ ಕಾರ್ಯಕ್ರಮ ಸಹ ಏರ್ಪಡಿಸಲಾಗಿತ್ತು.
ಹೊಸಸಿದ್ದಾಪುರದ ಶ್ರೀ ಚೌಡೇಶ್ವರಿ ದೇವಿಗೆ ಹಸಿರುಬಳೆಗಳಿಂದ ಲಲಿತಾದೇವಿ ಅಲಂಕಾರ ಮಾಡಿರುವುದು ವಿಶೇಷವಾಗಿತ್ತು. ಸಾವಿರಾರು ಬಳೆಗಳಿಂದ ಅಲಂಕೃತಗೊಂಡಿದ್ದ ದೇವಿಯ ದರ್ಶನವನ್ನು ಭಕ್ತರು ಪಡೆದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು.