ಚಿಂತಾಮಣಿ: ಇತ್ತೀಚೆಗೆ ಚಿಂತಾಮಣಿಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತಿವೆ. ಹಲವು ಬಡಾವಣೆಗಳಲ್ಲಿ ಕಳ್ಳತನದ ವಿಫಲಯತ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದ ಎನ್.ಆರ್.ಬಡಾವಣೆೆಯ ಮನೆಯೊಂದಕ್ಕೆ ಬಂದಿರುವ ನಾಲ್ಕುಕ್ಕೂ ಹೆಚ್ಚು ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಮನೆಯ ಸುತ್ತ ಸುತ್ತಾಡುತ್ತಿದ್ದು, ಮನೆಯ ಕ್ಯಾಮರಾಗಳಿಗೆ ಬೆಂಕಿ ಹಚ್ಚಿದಲ್ಲದೆ, ಪೊರಕೆಯಲ್ಲಿ ಸಿಸಿ ಕ್ಯಾಮರಾವನ್ನು ಹಾಳು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಜೀವ್ ನಗರ ಬಡಾವಣೆಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವಾಗ ಮಹಿಳೆ ಕಿರುಚಾಡಿದ್ದಾರೆ.