

ಕೋಲಾರ: ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ವಿಜಯಮ್ಮ ಅವರಿಗೆ ಪದೋನ್ನತಿ ಬಡ್ತಿ ನೀಡಿ ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರ ಆಸ್ಪತ್ರೆಗೆ ಶುಶ್ರೂಷಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಅ.29ರಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಆದೇಶಿಸಿದ್ದರೂ ಸ್ಥಾನ ಬಿಟ್ಟುಕೊಟ್ಟಿಲ್ಲ.
ಆದೇಶ ಆಗಿ ವಾರ ಕಳೆದರೂ ಸಹ ಸ್ಥಾನದಿಂದ ಬಿಡುಗಡೆಯಾಗದೆ ರಾಜಕೀಯ ಪ್ರಭಾವ ಬಳಿಸಿ ಇಲ್ಲೇ ಮುಂದುವರಿಯಲು ಹಲವು ಪ್ರಯತ್ನ ನಡೆಸುತ್ತಿರುವುದು ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಾಜ್ಯಾದ್ಯಂತ 208 ಶುಶ್ರೂಷಾಧಿಕಾರಿ ಹುದ್ದೆಯಿಂದ ಶುಶ್ರೂಷಾ ಅಧೀಕ್ಷಕರ ದರ್ಜೆ 2ರ ಹುದ್ದೆಗೆ ಪದೋನ್ನತಿ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿದ್ದಾರೆ. ಸರ್ಕಾರದ ಆದೇಶವನ್ನೂ ಲೆಕ್ಕಿಸದೆ ಬಿಡುಗಡೆಗೊಳ್ಳದೆ ಇಲ್ಲೇ ಮುಂದುವರಿಯಲು ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಬೇರೆ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಂದ ಎಸ್‌ಎನ್‌ಆರ್ ಆಸ್ಪತ್ರೆಗೆ ವರ್ಗಾವಣೆಗೊಂಡಿರುವ 3 ಮಂದಿ ಶುಶ್ರೂಷಾಧಿಕಾರಿಗಳು ಬಂದು ಅಽಕಾರ ಹಸ್ತಾಂತರ ಮಾಡಿಕೊಂಡಿದ್ದಾರೆ. ಇದರಿಂದಾಗಿ ವಿಜಯಮ್ಮ ಮೂಲ ಸ್ಥಾನ ಬಿಟ್ಟು ವರ್ಗಾವಣೆಗೊಂಡಿರುವ ಜಾಗಕ್ಕೆ ಹೋಗಲೇಬೇಕಿದೆ. ಆದರೆ ಕೋಲಾರದ ಆಸ್ಪತ್ರೆಯ ಆವರಣದಲ್ಲೇ ಮತ್ತೊಂದು ಹುದ್ದೆಗೆ ನಿಯೋಜನೆಗೊಂಡು ಕಾರ್ಯನಿರ್ವಹಿಸಬೇಕೆಂಬ ಕಾರಣಕ್ಕೆ ಮತ್ತೊಂದು ಕಡೆ ವರ್ಗಾವಣೆ ರದ್ದುಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದು, ಕೋಲಾರ ಬಿಟ್ಟು ಹೋಗಲು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಆಸ್ಪತ್ರೆಯಲ್ಲಿನ ಸಿಬ್ಬಂದಿಯಿAದಲೇ ಕೇಳಿ ಬಂದಿದೆ.
ಆಸ್ಪತ್ರೆಯಲ್ಲಿನ ಶುಶ್ರೂಷಾಧಿಕಾರಿ ಹುದ್ದೆಗಳಿಗೆ ಬೆಂಗಳೂರಿನ ಎಸ್‌ಡಿಎಸ್‌ಟಿಆರ್‌ಸಿ ಮತ್ತು ಆರ್‌ಜಿಟಿಸಿಡಿ ಶುಶ್ರೂಷಾಧಿಕಾರಿ ಕೆ.ಆರ್.ಸಾವಿತ್ರಿ, ಬೆಂಗಳೂರಿನ ಬೌರಿಂಗ್ ಕರ್ಜನ್ ಆಸ್ಪತ್ರೆಯ ಶುಶ್ರೂಷಾಧಿಕಾರಿ ಡಿ.ವಿಮಲಾ ಸೇರಿ ಒಟ್ಟು ಮೂವರು ಅಧಿಕಾರವಹಿಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಮತ್ತು ನರ್ಸಿಂಗ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ವಿಜಯಮ್ಮ ಶುಶ್ರೂಷಾಧಿಕಾರಿ ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದವರನ್ನು ಆರೋಗ್ಯ ಇಲಾಖೆಯ ನಿರ್ದೇಶಕರು ಬಡ್ತಿ ನೀಡಿ ಆದೇಶಿಸಿದ್ದಾರೆ.
* ಕಿರುಕುಳ ಆರೋಪ?
ವಿಜಯಮ್ಮ ಶುಶ್ರೂಷಾಧಿಕಾರಿಯಾಗಿ ಬಂದ ನಂತರ ಡಿ ಗ್ರೂಪ್, ಶುಶ್ರೂಷಕಿಯರು ಹಾಗೂ ಇತರೆ ಸಿಬ್ಬಂದಿಗೆ ಕಿರುಕುಳ ಕೊಟ್ಟಿರುವ ಆರೋಪ ಕೇಳಿಬಂದಿದೆ. ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಕೆಲ ಸಿಬ್ಬಂದಿ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸಚಿವರು ಆಸ್ಪತ್ರೆಯ ಕೆಲ ಅಽಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಜಯಮ್ಮ ಹೊರಗುತ್ತಿಗೆ, ಡಿ ಗ್ರೂಪ್ ನೌಕರರಿಂದ ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದರು, ಇದು ಸಿಬ್ಬಂದಿಯ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬಗ್ಗೆ ಕೂಡಲೇ ಸಿಬ್ಬಂದಿ ಗುತ್ತಿಗೆ ಸಂಸ್ಥೆಯವರ ಗಮನಕ್ಕೆ ತಂದಿದ್ದರು, ಖಾಲಿ ಕಾಗದದ ಮೇಲೆ ಯಾವ ಕಾರಣಕ್ಕೆ ಸಹಿ ಹಾಕಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ವ್ಯಾಟ್ಸಪ್‌ನಲ್ಲಿ ಪ್ರತಿಕ್ರಿಯೆ ಕೇಳಿದ್ದರು, ಇದಕ್ಕೆ ಯಾರೂ ಉತ್ತರ ನೀಡಬಾರದು ಎಂದು ಸಹ ಸಿಬ್ಬಂದಿಗೆ ವಿಜಯಮ್ಮ ಇತರರು ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕೋಟ್...
ಸರ್ಕಾರದಿಂದ ಆದೇಶ ಬಂದ ದಿನದಿಂದ ಬಿಡುಗಡೆಗೊಳ್ಳಲು 7 ದಿನ ಕಾಲಾವಕಾಶ ಇರುತ್ತದೆ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ವರ್ಗಾವಣೆಯಾಗಿರುವವರು ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ವಿಜಯಮ್ಮ ಸಹ ಶನಿವಾರದೊಳಗೆ ಬಿಡುಗಡೆಯಾಗುವುದಾಗಿ ಹೇಳಿದ್ದಾರೆ.
| ಡಾ.ಮಮತಾ, ಡಿಎಸ್, ಎಸ್‌ಎನ್‌ಆರ್ ಆಸ್ಪತ್ರೆ