ಶಿರಡಿ ಬಾಬಾ ದರ್ಶನ ಮುಗಿಸಿ ಬರುವಾಗ ಇದ್ದಕ್ಕಿದ್ದಂತೆ ಕಾರು ಪಂಕ್ಚರ್: ಮುಂದೆ ಕಾದಿತ್ತು ಭಾರಿ ಶಾಕ್​!

Car
Published on

ಮುಂಬೈ: ಮಹಾರಾಷ್ಟ್ರದ ಖತರ್ನಾಕ್ ಖದೀಮರು ತೆಲಂಗಾಣ ಮೂಲದ ಯಾತ್ರಿಗಳ ಮೇಲೆ ದಾಳಿ ಮಾಡಿ ಹಣ ದೋಚಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ವಾಸಿಯಲ್ಲಿ ನಡೆದಿದೆ.

ಸಂತ್ರಸ್ತರೆಲ್ಲರು ತೆಲಂಗಾಣದ ವಿಕಾರಬಾದ್​ ಜಿಲ್ಲೆಯವರು. ಸಂತ್ರಸ್ತರ ಮೇಲೆ ಖದೀಮರು ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಕಾರಬಾದ್​ನ ಕೆರಮುಲು ಬಂಡವೆಲ್ಕಿರ್ಕಳ ಗ್ರಾಮದ ಶಾಲಾ ಮುಖ್ಯೋಪಧ್ಯಾಯ ಹಾಗೂ ಕುಲ್ಕಾಚಾರ್ಲಾದ ತೆಲಂಗಾಣ ಗ್ರಾಮೀಣ ಬ್ಯಾಂಕ್​ ಮ್ಯಾನೇಜರ್​ ರಮೇಶ್ ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದಲ್ಲಿರುವ ಶಿರಡಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇಬ್ಬರು ತಮ್ಮ ಕುಟುಂಬದೊಂದಿಗೆ ಯಾತ್ರೆ ಮುಗಿಸಿ ಶುಕ್ರವಾರ ಮರಳಿ ಬರುತ್ತಿದ್ದರು. ವಾಸಿ ಸಮೀಪ ಬಂದಾಗ ಕಾರು ಪಂಕ್ಚರ್​ ಆಗಿದೆ. ಖದೀಮರು ಮೊಳೆಗಳನ್ನು ಇಟ್ಟು ಕಾರು ಪಂಚರ್​ ಮಾಡಿದ್ದಾರೆ.

ಇತ್ತ ಖದೀಮರನ್ನು ನೋಡಿ ಪಂಚರ್ ಕಾರಿನಲ್ಲಿ ಎಸ್ಕೇಪ್​ ಆಗಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ಉದ್ರಿಕ್ತಗೊಂಡಿದ್ದ ಖದೀಮರ ಗುಂಪು ಇಬ್ಬರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಲಾಂಗು ಮಚ್ಚುಗಳನ್ನು ಮುಂದಿಟ್ಟು ಬೆದರಿಸಿ ಹಣ, ಆಭರಣಗಳನ್ನು ದೋಚಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net