

ಕೋಲಾರ: ದೇವಾಲಯದಲ್ಲಿ ಹಾಕಿದ್ದ ಧ್ವನಿವರ್ಧಕ ಶಬ್ಧ ಕಡಿಮೆ ಮಾಡಲು ಹೇಳಿದ ಕಾರಣಕ್ಕೆ ಹಿರಿಯ ಸಾಹಿತಿ ಕೆ.ರಾಮಯ್ಯ ಹಾಗೂ ಅವರ ಮಗ ಮೇವರ್ಷ ಮೇಲೆ ಕೆಲವರು ಹಲ್ಲೆ ನಡೆಸಿರುವ ಟನೆ ಗುರುವಾರ ಸಂಭವಿಸಿದೆ.
ತಾಲೂಕಿನ ತೇರಹಳ್ಳಿ ಬೆಟ್ಟದ ಮೇಲಿನ ಪಾಪರಾಜನಹಳ್ಳಿ ಬುಡ್ಡಿ ದೀಪ ನಿವಾಸದಲ್ಲಿ ದಲಿತ ಹೋರಾಟಗಾರ ಹಾಗು ಸಾಹಿತಿ ಕೆ.ರಾಮಯ್ಯ ಇದ್ದರು, ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಧ್ವನಿ ವರ್ಧಕ ಶಬ್ಧ ಜೋರಾಗಿ ಇಡಲಾಗಿತ್ತು. ಶಬ್ಧವನ್ನು ಕಡಿಮೆ ಮಾಡುವಂತೆ ಕಾರ್ಯಕ್ರಮದ ಆಯೋಜಕರಿಗೆ ತಿಳಿಸಲಾಯಿತು. ಇದರಿಂದ ಗಲಾಟೆ ಮಾಡಿದ ಮಂಜುನಾಥ್, ಬೈರಪ್ಪ, ಮುನಿಯಪ್ಪ, ಸುಬ್ಬು ಸೇರಿದಂತೆ ಇತರರು ರಾಮಯ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಆದ ಕಾರಣ ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಗಾಯಗಳಾಗಿವೆ. ಅಲ್ಲದೆ ಪುತ್ರ ಮೇಘಾವರ್ಷನಿಗೂ ಗಾಯಳಾಗಿವೆ.
ಕೋಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಪರಾಜನಹಳ್ಳಿ ಸದಸ್ಯ ಮಂಜುನಾಥ, ಮುಖಂಡರಾದ ಬೈರಪ್ಪ, ತೇರಹಳ್ಳಿಯ ಮುನಿಯಪ್ಪ ಮುಂತಾದವರು ತೀವ್ರವಾಗಿ ಹಲ್ಲೆ ಮಾಡಿ, ನೀವು ಇಲ್ಲಿಂದ ಹೊರ ಹೋಗಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಸದಸ್ಯ ಮಂಜುನಾಥ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿ ಎಂ.ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಟನೆ ಸಂಬಂಧ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಲ್ಲೆ ನಡೆಸಿರುವ ಮಂಜುನಾಥ್ ಇತರರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಹಿರಿಯ ಸಾಹಿತಿ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದು, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.