ಕುಂಭಮೇಳದ IIT ಬಾಬಾ ಮೇಲೆ ದಾಳಿ!; ಕೋಲುಗಳಿಂದ ಹಲ್ಲೆ: ಕಾರಣ ಏನು?

dk - 2025-03-01T102425.085
Published on

ಕುಂಭಮೇಳದ ಸಮಯದಲ್ಲಿ ಜನಪ್ರಿಯತೆ ಗಳಿಸಿದ IIT ಬಾಬಾ ಎಂದು ಕರೆಯಲ್ಪಡುವ ಅಭಯ್​ ಸಿಂಗ್​ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ನೊಯ್ಡಾದ ಖಾಸಜಗಿ ಚಾನಲ್​ನಲ್ಲಿ ನಡೆದ ಸುದ್ದಿ ಚರ್ಚೆ(ಡಿಬೇಟ್​) ವೇಳೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸ್ವತ ಐಐಟಿ ಬಾಬಾ ದೂರು ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

''ಚರ್ಚೆ ವೇಳೆ ಏಕಾಏಕಿ ಸುದ್ದಿ ಸಂಸ್ಥೆಗೆ ನುಗ್ಗಿದ ಕೇಸರಿ ಬಟ್ಟೆ ಧರಿಸಿದ ಕೆಲವರ ಗುಂಪೊಂದು ಅನುಚಿತವಾಗಿ ವರ್ತಿಸಿ, ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅಭಯ್​ ಸಿಂಗ್​ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ''.

ಘಟನೆ ಬಳಿಕ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.

ಇನ್ನು ಈ ಕುರಿತು ಸಾಮಾಜಿಕ ಮಾಧ್ಯಮಲ್ಲಿ ವಿಡಿಯೋಂದು ಹರಿದಾಡುತ್ತಿದ್ದು, '' ಸ್ಟೂಡಿಯೋಗೆ ನುಗ್ಗಿ ಕಾವಿ ಗುಂಪೊಂದು ಐಐಟಿ ಬಾಬಾ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಾಬಾ ಹೊರ ಬರಲು ಹರಸಾಹಸ ಪಡಬೇಕಾಗಿತು ಎಂದು ವೈರಲ್​ ಆಗಿರುವ ವಿಡಿಯೋದಲ್ಲಿ ಹೇಳಲಾಗಿದೆ. ಆದರೆ, ವಾಗ್ವಾದಕ್ಕೆ ಮತ್ತು ಹಲ್ಲೆಗೆ ಕಾರಣವೇನು ಎಂಬುದು ನಿಖರವಾಗಿ ತಿಳಿದಿಲ್ಲ''.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net