ದೆಹಲಿ ಸಿಎಂ ಗುಪ್ತಾ ಮೇಲೆ ದಾಳಿ: ಝಡ್​ ಶ್ರೇಣಿ ಭದ್ರತೆ ನೀಡಿದ CRPF

Delhi CM Rekha Gupta
Published on

CRPF: ಗುಜುರಾತ್​ನ ರಾಜ್​ಕೋಟ್​​ನ 41 ವರ್ಷದ ವ್ಯಕ್ತಿಯೊಬ್ಬ ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನಲೆ, ಮುಖ್ಯಮಂತ್ರಿ ರೇಖಾಗುಪ್ತ ಅವರಿಗೆ ಝಡ್​ ವರ್ಗದ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನೀಡಿದೆ.

ಗುಪ್ತಾ ಅವರ ಭದ್ರತೆಗಾಗಿ ಸಿರ್​ಪಿಎಫ್​ ಸಿಬ್ಬಂದಿಯ ಜೊತೆಗೆ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇನ್ನು ಬುಧವಾರ 41 ವರ್ಷದ ವ್ಯಕ್ತಿಯೊಬ್ಬ ಸಿಎಂ ಅವರ ಕೂದಲನ್ನು ಎಳೆದು,ತಳ್ಳಿ, ಕಪಾಳಮೋಕ್ಷ ಮಾಡಿದ್ದಾನೆ ಎಂದು ವರದಿಯಾಗಿದೆ.

ಸುದ್ದಿ ಮೂಲಗಳ ಪ್ರಕಾರ, ರಾಜ್‌ಕೋಟ್‌ನ ರಾಜೇಶ್ ಭಾಯ್ ಖಿಮ್ಜಿ ಭಾಯ್ ಸಕರಿಯಾ ಎಂದು ಗುರುತಿಸಲ್ಪಟ್ಟ ಆರೋಪಿ, ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆದ 'ಜನ್ ಸುನ್‌ವೈ' ಸಾರ್ವಜನಿಕ ಸಭೆಗೆ ಹೋಗಿದ್ದರು. ಈ ವೇಳೆ ದಾಳಿಕೋರ ಗುಪ್ತಾ ಮೇಲೆ ಕೂಗಾಡಿ, ಕಪಾಳ ಮೋಕ್ಷ ಮಾಡಿ ನಿಂದಿಸಲು ಪ್ರಾರಂಭಿಸಿದ್ದು, ಕೆಲವು ಕಾಗದ ಪತ್ರಗಳನ್ನು ನೀಡಿದ್ದಾನೆ ಎಂದು ವರದಿಯಾಗಿದೆ.

ಸಕರಿಯಾ ನಾಯಿ ಪ್ರಿಯಾ ಎಂದು ವರದಿಯಾಗಿದೆ. ದೆಹಲಿ-ಎನ್​ಸಿಆರ್​​ನಲ್ಲಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂಬ ಸುಪ್ರೀಂ ಕೋರ್ಟ್​ನ ಇತ್ತೀಚಿನ ತೀರ್ಪಿನಿಂದ ಅಸಮಾಧಾನಗೊಂಡಿದ್ದನು. ಇನ್ನು ತನ್ನ ಮಗ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾನೆ. ಕೆಲವೊಮ್ಮೆ ಕುಟುಂಬದಲ್ಲಿರುವವರ ಮೇಲೂ ದಾಳಿ ನಡೆಸುತ್ತಾನೆ ಎಂದು ಆತನ ತಾಯಿ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

ದಾಳಿ ನಡೆದ ಕೆಲವೇ ಗಂಟೆಗಳ ನಂತರ, ಆರೋಪಿಯು ಸಿಎಂ ಮನೆ ಮೇಲೆ ದಾಳಿ ನಡೆಸುತ್ತಿರುವ ದೃಶ್ಯಾವಳಿಗಳು ಸಿಸಿಟಿಯಲ್ಲಿ ಸೆರೆಯಾಗಿದ್ದು, ತಕ್ಷಣವೇ ಆತನನ್ನು ದೆಹಲಿ ಪೊಲೀಸರು ಕೊಲೆ ಪ್ರಕರಣದ ಅಡಿಯಲ್ಲಿ ಬಂಧಿಸಿ, 5 ದಿನಗಳ ಕಸ್ಟಡಿಗೆ ಕಳುಹಿಸಿದ್ದಾರೆ. ಇನ್ನು ದಾಳಿಯ ಉದ್ದೇಶವನ್ನು ಕಂಡುಹಿಡಿಯಲು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ದಾಳಿ ವಿಷಯಕ್ಕೆ ಸಂಬಂಧಿಸಿದಂತೆ, ಪಿಎಸ್​ ಸಿವಿಲ್​ ಲೈನ್ಸ್​ನಲ್ಲಿ 109(1)/132/221 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net