ಡಿಜಿಟಲ್​ ಅರೆಸ್ಟ್​ : 77 ಲಕ್ಷಕ್ಕೂ ಅಧಿಕ ಹಣ ದೋಚಿದ ಸೈಬರ್​ ವಂಚಕರು! |Digital Arrest

untitled-design-2025-08-21t105822535-68a6ae88b57ca
Published on

Digital Arrest : ಚಂಡೀಗಡದ ನಿವಾಸಿಯೊಬ್ಬರು ಡಿಜಿಟಲ್​ ಅರೆಸ್ಟ್​ ಹಗರಣದಲ್ಲಿ 77 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದು, ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರದ ಸೈಬರ್ ಕ್ರೈಮ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಆರೋಪಿಗಳನ್ನು ಮಹಾರಾಷ್ಟ್ರದ ಸಾಜಿದ್​​ ಅಹ್ಮದ್​ ಪಟೇಲ್​ (30) ಮತ್ತು ಶಾಯಿದ್​ ರಫೀಕ್​ ಮುಲ್ಲಾ (37) ಎಂದು ಗುರುತಿಸಲಾಗಿದೆ.

ಆಕೆ ಕೊಟ್ಟ ದೂರು ಏನಾಗಿತ್ತು?

ಇತ್ತೀಚಿಗೆ ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ವಂಚಕರು ಸಂತ್ರಸ್ತೆಗೆ ಕರೆ ಮಾಡಿ ಅಪರಾಧ ಶಾಖೆಯ ಅಧಿಕಾರಿಯಂತೆ ನಟಿಸಿದ್ದು, ಜೆಟ್ ಏರ್‌ವೇಸ್ ಸಿಇಒ ನರೇಶ್ ಗೋಯಲ್ ಅವರಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಆಕೆ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಹಾಗೆ ಕರೆ ಮಾಡಿದ ವ್ಯಕ್ತಿ ನಕಲಿ ಬಂಧನ ವಾರಂಟ್​ಗಳೊಂದಿಗೆ ಆಕೆಯನ್ನು ಬೆದರಿಸಿ, ವಾಟ್ಸಾಪ್​ ಕರೆಗಳ ಮೂಲಕ ಸುಪ್ರೀಂ ಕೋರ್ಟ್​ ಆದೇಶವನ್ನು ನಕಲಿ ಮಾಡಿದ್ದಾನೆ. ನಂತರ ಬೆದರಿಕೆಗಳ ಹೆದರಿ, ಆಕೆ ಕೆನರಾ ಬ್ಯಾಂಕ್, ಪಿಎನ್‌ಬಿ, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿಯಲ್ಲಿನ ತನ್ನ ಖಾತೆಗಳಿಂದ ನಾಲ್ಕು ಆರ್‌ಟಿಜಿಎಸ್ ವಹಿವಾಟುಗಳ ಮೂಲಕ 77,42,420 ರೂ.ಗಳನ್ನು ವರ್ಗಾಯಿಸಿದ್ದಾಳೆ.

ಆರೋಪಿಗಳಿಂದ ಯಾವ ವಸ್ತುಗಳನ್ನು ವಶಪಡಿಸಲಾಗಿದೆ?

ಸುದ್ದಿ ಮೂಲಗಳ ಪ್ರಕಾರ ಸೈಬರ್​ ಪೊಲೀಸರು, ಈ ಪ್ರಕರಣದಲ್ಲಿ ಸಾಜಿದ್​ ಮತ್ತು ಶಾಯೀದ್​ ಪಾತ್ರ ಇರುವುದು ತನಿಖೆಯಲ್ಲಿ ಕಂಡುಕೊಂಡಿದ್ದು, ಅವರಿಬ್ಬರನ್ನೂ ಬಂಧಿಸಿದ್ದಾರೆ. ಅದರ ಜೊತೆಗೆ ಹಲವು ಮೊಬೈಲ್​ಗಳು, ಬ್ಯಾಂಕ್​ ಕಾರ್ಡ್​ಗಳು, ಆಧಾರ್​ ಮತ್ತು ಪ್ಯಾನ್​ ಕಾರ್ಡ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಕೆವೈಸಿ ಮತ್ತು ಟೆಲಿಕಾಂ ಡೇಟಾದ ಮೂಲಕ, ಪೊಲೀಸರು ವಂಚಕರ ಜಾಡು ಹಿಡಿದಿದ್ದು, ಸಿಮ್ ಕಾರ್ಡ್‌ಗಳು, ಎಸ್‌ಬಿಐ ಎಟಿಎಂ ಕಾರ್ಡ್ ಮತ್ತು ವಿವೋ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಮಾಡಿದ್ದಾರೆ.

ಡಿಜಿಟಲ್ ಅರೆಸ್ಟ್ ಹಗರಣ ಎಂದರೇನು?

ಡಿಜಿಟಲ್ ಬಂಧನ ಹಗರಣ ಎಂದರೆ ವಾಟ್ಸಾಪ್, ವಿಡಿಯೋ ಕರೆಗಳು ಮತ್ತು ಇತರ ಡಿಜಿಟಲ್ ವಿಧಾನಗಳ ಮೂಲಕ ( ಡಿಜಿಟಲ್ ರೂಪದಲ್ಲಿ ) ಮಾಡುವ ವಂಚನೆ. ವಿವಿಧ ಕಾನೂನುಬಾಹಿರ ಚಟುವಟಿಕೆಗಳಿಗೆ ಬಲಿಪಶುವಿನ ಮೇಲೆ ಆರೋಪ ಹೊರಿಸಿ, ಹಣವನ್ನು ವರ್ಗಾಯಿಸಲು ಪ್ರೇರೇಪಿಸಿ, ಪ್ರಕರಣಗಳನ್ನು ಕೈಬಿಡುವಂತೆ ಪ್ರಚೋಧನೆ ಮಾಡುವುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net