ಎರಡನೇ ಅಲೆಯಲ್ಲೇ ಮಕ್ಕಳ ಮೇಲೆ ದಾಳಿ! ಒಂದೇ ಜಿಲ್ಲೆಯಲ್ಲಿ ಕೇವಲ 21 ದಿನಗಳಲ್ಲಿ 341 ಮಕ್ಕಳಿಗೆ ಸೋಂಕು ದೃಢ!

corona
Published on

ಜೈಪುರ: ಕರೊನಾ ಎರಡನೇ ಅಲೆ ದೇಶಾದ್ಯಂತ ತನ್ನ ಅಬ್ಬರವನ್ನು ಮುಂದುವರಿಸಿದೆ. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರಿಗೆ ಹೆಚ್ಚಿನ ಪರಿಣಾಮ ಉಂಟಾಗಿದ್ದು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿ ಎಫೆಕ್ಟ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇದರ ಮಧ್ಯೆ ಎರಡನೇ ಅಲೆಯಲ್ಲೇ ಹೆಚ್ಚು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಕಳೆದ 21 ದಿನಗಳಲ್ಲಿ ಬರೋಬ್ಬರಿ 341 ಮಕ್ಕಳಲ್ಲಿ (18 ವರ್ಷ ಒಳಗಿನವರು) ಕರೊನಾ ಸೋಂಕು ದೃಢವಾಗಿದೆ. ಆದರೆ ಅದೃಷ್ಟವಶಾತ್​ ಯಾವ ಮಕ್ಕಳಲ್ಲೂ ಗಂಭೀರ ಪರಿಣಾಮ ಕಂಡುಬಂದಿಲ್ಲ ಎನ್ನಲಾಗಿದೆ. ಆದರೆ ಇದು ಮೂರನೇ ಅಲೆಯೂ ಆಗಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೌಸಾ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಇಲ್ಲಿಯವರೆಗೆ 6,288 ಪ್ರಕರಣ ಕಾಣಿಸಿಕೊಂಡಿದೆ. ಸೋಂಕು ಪತ್ತೆಯಾಗಿರುವ ಮಕ್ಕಳ ಮನೆಯಲ್ಲೂ ಸೋಂಕಿತರಿದ್ದು, ಅವರಿಂದಲೇ ಮಕ್ಕಳಿಗೂ ಸೋಂಕು ಹರಡಿರಬಹುದು ಎನ್ನಲಾಗಿದೆ. ಜಿಲ್ಲೆಯಲ್ಲಿ ಮೂರನೇ ಅಲೆ ನಿಯಂತ್ರಣಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net