

ಬೆಂಗಳೂರು: ನಟ ಚೇತನ್ ಚಂದ್ರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ನಟ ಚೇತನ್ ಚಂದ್ರ ವಿರುದ್ಧವೂ ದೂರು ದಾಖಲಾಗಿದೆ.
ಕಿರಣ್ ಮತ್ತು ಹರೀಶ್ ಬಂಧಿತರು.
ಭಾನುವಾರ ನಟ ಚೇತನ್ ಚಂದ್ರ ಅವರ ಮೇಲೆ ೨೦ ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದ್ದರು. ಇದರಿಂದ ಚೇತನ್ ಅವರ ಮುಖಕ್ಕೆ ಮತ್ತು ಕಾಲಿಗೆ ಗಾಯವಾಗಿತ್ತು. ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಕನಕಪುರ ರಸ್ತೆಯ ಕಗ್ಗಲೀಪುರದಲ್ಲಿ ಚೇತನ್ ಅವರ ಮೇಲೆ ಜನರ ಗುಂಪು ಹಲ್ಲೆ ನಡೆಸಿತ್ತು. ಮೂಗಿನಲ್ಲಿ ರಕ್ತಸ್ರಾವವಾಗಿ ಚೇತನ್ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಚೇತನ್ ಹಲ್ಲೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದರ ವಿಡಿಯೋ ಮತ್ತು ಚೇತನ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಚೇತನ್ ಚಂದ್ರ ವಿರುದ್ಧ ಎ್ಐಆರ್:
ಮತ್ತೊಂದು ಕಡೆ ನಟ ಚೇತನ್ ಚಂದ್ರ ವಿರುದ್ದವೂ ಎ್ಐಆರ್ ದಾಖಲಾಗಿದೆ.
ಐಶ್ವರ್ಯ ಹಾಗೂ ಪತಿ ಕಿರಣ್ ಮೇಲೆ ಹಲ್ಲೆ ಆರೋಪದ ಮೇಲೆ ದೂರು ದಾಖಲಾಗಿದೆ.
ಈ ಬಗ್ಗೆ ಕಗ್ಗಲಿಪುರ ಪೊಲೀಸ್ ಠಾಣೆಗೆ ಐಶ್ವರ್ಯ ದೂರು ನೀಡಿದ್ದರು. ದೂರು ಆಧರಿಸಿ ಚೇತನ್ ಮೇಲೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಚೇತನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೇತನ್ ಮಧ್ಯದ ಬೆರಳು ತೋರಿಸಿದ್ದರು:
ಈ ಬಗ್ಗೆ ದೂರುದಾರೆ ಐಶ್ವರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಭಾನುವಾರ ರಾತ್ರಿ ಬೈಕ್‌ನಲ್ಲಿ ಬರಬೇಕಾದರೆ ಸೈಡ್ ತೆಗೆದುಕೊಂಡಿದ್ದಕ್ಕೆ ಚೇತನ್‌ಗೆ ಕೋಪ ಬಂದಿದೆ. ನನ್ನ ಪತಿಗೆ ಚೇತನ್ ಮಧ್ಯದ ಬೆರಳು ತೋರಿಸಿದ್ದಾರೆ. ನಂತರ ನನ್ನ ಪತಿ ಬೇಕರಿ ಹತ್ತಿರ ಬೈಕ್ ನಿಲ್ಲಿಸಿದಾಗ ಚೇತನ್ ಬಂದು ಡಿಚ್ಚಿ ಹೊಡೆದಿದ್ದಾರೆ. ಆ ವೇಳೆ ನಾನು ಬೇಕರಿ ಬಳಿ ಇದ್ದೆ. ನಾನು ಹೋಗಿ ಸಾರಿ ಕೇಳಿದರೂ, ನನಗೂ ಚೇತನ್ ಹೊಡೆದಿದ್ದಾರೆ. ನನಗೆ ಹೊಡೆದಾಗ ಸಾರ್ವಜನಿಕರು ಚೇತನ್‌ಗೆ ಹೊಡೆದಿದ್ದಾರೆ.
ವ್ಹೀಲಿಂಗ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ , ಬೇರೆ ವಿಡಿಯೋಗಳನ್ನು ಮಾಡಲಾಗಿದೆ ಆದರೆ ವ್ಹೀಲಿಂಗ್ ವಿಡಿಯೋ ಯಾಕೆ ಮಾಡಿಲ್ಲ ಅವರು, ನನ್ನ ಗಂಡ ಜೈಲಿನಲ್ಲಿ ಕೂತಂತೆ ಅವರು ಕುಳಿತುಕೊಳ್ಳಬೇಕು ಎಂದು ಹೇಳಿದ್ದಾರೆ.