ಸುದ್ದಿ ಸಮಗ್ರ: ಸ್ವಾವಲಂಬಿ ಭಾರತ ಪರಿಹಾರ ಪ್ಯಾಕೇಜ್, ಮೇ 12ಕ್ಕೆ ಮುನ್ನ ಆರ್​ಬಿಐ ಕ್ರಮಗಳು

page 9 1
Published on

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಘೋಷಿಸಲಾದ ಲಾಕ್​ಡೌನ್ ಪರಿಣಾಮದಿಂದ ಅಸ್ತವ್ಯಸ್ತಗೊಂಡ ಆರ್ಥಿಕತೆಯ ಚೇತರಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ -ಠಿ; 20 ಲಕ್ಷ ಕೋಟಿಗೂ ಹೆಚ್ಚಿನ ಪರಿಹಾರ ಪ್ಯಾಕೇಜ್ ಕುರಿತಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದು ದಿನ ಮಾಹಿತಿ ನೀಡಿದರು. ಸ್ವಾವಲಂಬಿ ಭಾರತ ಅಭಿಯಾನಕ್ಕೆ ಪ್ರಕಟಿಸಲಾದ ಈ ಪ್ಯಾಕೇಜ್​ನಲ್ಲಿ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ನೆರವು ದೊರಕಿದೆ, ಸಾಲದ ಸರಳೀಕರಣ, ಸುಧಾರಣಾ ಕ್ರಮಗಳೇನು, ಕಾನೂನು ತಿದ್ದುಪಡಿಗಳೆಷ್ಟು ಎಂಬ ಸಮಗ್ರ ಚಿತ್ರಣ ಇಲ್ಲಿದೆ. ಈ ಪ್ಯಾಕೇಜ್​ನಲ್ಲಿ ಕೆಲವು ಬಜೆಟ್ ಮಂಜೂರಾತಿಯಾಗಿದ್ದು, ಮತ್ತೆ ಕೆಲವು ಸರ್ಕಾರ ಮೊದಲ ಹಂತದಲ್ಲಿ ಘೋಷಣೆ ಮಾಡಿದ -ಠಿ; 1.70 ಲಕ್ಷ ಕೋಟಿ ಪ್ಯಾಕೇಜ್​ನ ನೆರವು ಹಾಗೂ ಬ್ಯಾಂಕ್​ಗಳಲ್ಲಿ ಮತ್ತು ಜನರ ಕೈಯಲ್ಲಿ ಹಣ ಇರುವಂತೆ ಮಾಡಲು ಆರ್​ಬಿಐ ಘೋಷಿಸಿರುವ ಹಲವು ಉಪಕ್ರಮಗಳೂ ಒಳಗೊಂಡಿವೆ.

ಕಿಸಾನ್ ಕ್ರೆಡಿಟ್ ಕಾರ್ಡ್​ನಡಿ ರೈತರಿಗೆ ನೆರವು: * ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚುವರಿ ಮೊತ್ತ: ರೂ. 2 ಲಕ್ಷ ಕೋಟಿ.* ನಬಾರ್ಡ್ ಮೂಲಕ ರೈತರಿಗೆ ಹೆಚ್ಚುವರಿ ತುರ್ತು ಕಾರ್ಯನಿರತ ಬಂಡವಾಳ: ರೂ. 30,000 ಕೋಟಿ.* ಗಿಡಮೂಲಿಕೆಗಳ ಕೃಷಿಗೆ ಪೋ›ತ್ಸಾಹ: ರೂ. 4,000 ಕೋಟಿ.* ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ:ರೂ. 5,000 ಕೋಟಿ.* ವಲಸೆ ಕಾರ್ವಿುಕರಿಗೆ ಎರಡು ತಿಂಗಳು ಉಚಿತ ಆಹಾರ ಧಾನ್ಯ ಪೂರೈಕೆ: ರೂ. 3,500 ಕೋಟಿ.* ವಸತಿ ಯೋಜನೆಗಳ ಸಾಲಾಧರಿತ ಸಬ್ಸಿಡಿ ಯೋಜನೆ: -ರೂ. 70,000 ಕೋಟಿ. * ಮುದ್ರಾ-ಶಿಶು ಸಾಲಗಳು: ರೂ. 1,500 ಕೋಟಿ.* ಆಪರೇಷನ್ ಗ್ರೀನ್ಸ್’ ವಿತರಣೆ: 500 ಕೋಟಿ ರೂಪಾಯಿ. * ಸಾಮಾಜಿಕ ಮೂಲ ಸೌಕರ್ಯ ಯೋಜನೆಗಳಿಗೆ ಕಾರ್ಯಸಾಧ್ಯತೆ ಅಂತರ ನಿಧಿ: 8,100 ಕೋಟಿ ರೂಪಾಯಿ.

ಭವಿಷ್ಯ ನಿಧಿ * ನೌಕರರ ಭವಿಷ್ಯ ನಿಧಿ (ಇಪಿಎಫ್) ವಂತಿಗೆಯಲ್ಲಿ ಇಳಿಕೆಯಿಂದ ಉಳಿತಾತವಾಗುವ ಹಣ: ರೂ. 6,750 ಕೋಟಿ.* ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಉದ್ಯೋದಾತರು ಮತ್ತು ಕಾರ್ವಿುಕರಿಗೆ ಇಪಿಎಫ್ ಬೆಂಬಲ: ರೂ. 2,800 ಕೋಟಿ.

ಎಂಎಸ್​ಎಂಇಗೆ ರೂ.3 ಲಕ್ಷ ಕೋಟಿ ಸಾಲ: * ಎಂಎಸ್​ಎಂಇಗಳಿಗೆ ಉಪಅಧೀನ ಸಾಲ: ರೂ. 20,000 ಕೋಟಿ * ಎಂಎಸ್​ಎಂಇಗಳಿಗೆ ಹೂಡಿಕೆ ನಿಧಿ: ರೂ. 50,000 ಕೋಟಿ * ಎನ್​ಬಿಎಫ್​ಸಿ ಭಾಗಶಃ ಸಾಲ ಖಾತರಿ: ರೂ. 45,000 ಕೋಟಿ * ಕಿರು ಆಹಾರ ಉದ್ಯಮಗಳ ಸ್ಥಾಪನೆಗೆ ನೆರವು: ರೂ 10,000 ಕೋಟಿ.* ಎನ್​ಡಿಎಫ್​ಸಿ/ಎಚ್​ಎಫ್​ಸಿ/ಎಂಎಫ್​ಐಗಳಿಗೆ ವಿಶೇಷ ಲಿಕ್ವಿಡಿಟಿ: ರೂ. 30,000 ಕೋಟಿ * ವಿದ್ಯುತ್ ವಿತರಣೆ ಕಂಪನಿಗಳಿಗೆ ನೆರವು: ರೂ. 90,000 ಕೋಟಿ * ಎನ್ಡಿ​ಎಸ್/ಟಿಸಿಎಸ್ ಕಡಿತದಲ್ಲಿ ಇಳಿಕೆ: ರೂ. 50,000 ಕೋಟಿ

ಮತ್ಸ್ಯ ಸಂಪದ * ಮೀನುಗಾರರಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ:ರೂ. 20,000 ಕೋಟಿ.* ಕೃಷಿ ಮೂಲಸೌಕರ್ಯ: 1 ಲಕ್ಷ ಕೋಟಿ.* ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ: ರೂ. 15,000 ಕೋಟಿ. * ಜೇನು ಸಾಕಣೆಗೆ ಪೋ›ತ್ಸಾಹ: ರೂ. 500 ಕೋಟಿ.* ನರೇಗಾದಡಿ ವಲಸೆ ಕಾರ್ವಿುಕರಿಗೆ ಉದ್ಯೋಗ ನೀಡಲು ಹೆಚ್ಚುವರಿ ಅನುದಾನ: ರೂ. 40,000 ಕೋಟಿ.

ರೂ. 20 ಲಕ್ಷ ಕೋಟಿ ಪ್ಯಾಕೇಜ್​ನಿಂದ ಬಹಳಷ್ಟು ಜನವಿಭಾಗಗಳು ವಂಚಿತವಾಗಿವೆ ಹಣಕಾಸು ಸಚಿವರ ಉಪಕ್ರಮಗಳು ನಿರಾಶಾದಾಯಕವಾಗಿದೆ. ಸರ್ಕಾರ ಉದ್ದೇಶಪೂರ್ವಕವಾಗಿಯೇ ಸಂಸತ್ತನ್ನು ನಿರ್ಲಕ್ಷಿಸುತ್ತಿದೆ. ಜನಸಾಮಾನ್ಯರಿಗೆ ಉಪಯೋಗಕ್ಕೆ ಬಾರದ ಈ ಪ್ಯಾಕೇಜ್ ಅನ್ನು ಕೇಂದ್ರ ಪರಿಷ್ಕರಿಸಬೇಕು. | ಪಿ. ಚಿದಂಬರಂ ಕಾಂಗ್ರೆಸ್ ಹಿರಿಯನಾಯಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಒಳಪಟ್ಟಿರದ ಅಥವಾ ಪಡಿತರ ಚೀಟಿ ಹೊಂದಿರದವರಿಗೆ ಕನಿಷ್ಠ 10 ಕೆ.ಜಿ ಅಕ್ಕಿ ನೀಡಬೇಕು. ಸೆಪ್ಟೆಂಬರ್​ವರೆಗೆ ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯಡಿಯಲ್ಲಿ ಉಚಿತವಾಗಿ ಪಡಿತರ ಹಂಚಿಕೆಯಾಗಬೇಕು. ಬಜೆಟ್ ಹಂಚಿಕೆ ಹೊರತು ಪಡಿಸಿದರೆ ಆರ್ಥಿಕ ಪ್ಯಾಕೇಜ್​ನ ಮೌಲ್ಯ -ಠಿ; 1 ಲಕ್ಷ ಕೋಟಿಗೂ ಕಡಿಮೆಯಿದೆ. ಡಿಸೆಂಬರ್​ನಿಂದ ರಾಜ್ಯಳಿಗೆ ಹಂಚಿಕೆ ಮಾಡದ ಜಿಎಸ್​ಟಿಯ ಪಾಲನ್ನು ಬಿಡುಗಡೆ ಮಾಡಬೇಕು. | ವೀರಪ್ಪ ಮೊಯ್ಲಿ ಕಾಂಗ್ರೆಸ್ ಹಿರಿಯ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net