ಭಾರಿ ಮೇಘಸ್ಫೋಟ; ಅಮರನಾಥ ಯಾತ್ರಿಕರ ಪೈಕಿ ಕನಿಷ್ಠ 10 ಮಂದಿಯ ಸಾವು!?

Cloud Blast
Published on

ಶ್ರೀನಗರ: ಹಿಂದುಗಳ ಪವಿತ್ರ ಕ್ಷೇತ್ರ ಅಮರನಾಥ ಬಳಿ ಇಂದು ಭಾರಿ ಮೇಘಸ್ಫೋಟ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿದ್ದು, ಕನಿಷ್ಠ ಹತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸಾವುನೋವಿನ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಕಾಶ್ಮೀರದ ಹಿಮಾಲಯದ ದಕ್ಷಿಣ ಭಾಗದಲ್ಲಿ ಸಂಜೆ ಐದೂವರೆಯ ಸುಮಾರಿಗೆ ಸುರಿಯುತ್ತಿದ್ದ ಭಾರಿ ಮಳೆಯ ನಡುವೆಯೇ ಈ ಮೇಘಸ್ಫೋಟ ಸಂಭವಿಸಿದ್ದು, ಹಠಾತ್ ಪ್ರವಾಹ ಸಂಭವಿಸಿ, 25 ಟೆಂಟುಗಳು, ಮೂರು ಕಮ್ಯುನಿಟಿ ಕಿಚನ್​ಗಳು ಹಾನಿಗೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್, ಸೇನೆ ಹಾಗೂ ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಅವು ಇಂತಿವೆ.

  • ಎನ್​ಡಿಆರ್​ಎಫ್​: 011-23438252, 011-23438253
  • ಕಾಶ್ಮೀರ ವಿಭಾಗೀಯ ಸಹಾಯವಾಣಿ: 0194-2496240
  • ಅಮರನಾಥ ಕ್ಷೇತ್ರದ ಸಹಾಯವಾಣಿ: 0194-2313149
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net