ಮಹಾಕುಂಭಮೇಳದಲ್ಲಿ Dubai Sheikh ವೇಷ ಧರಿಸಿ ರೀಲ್ಸ್​ ಮಾಡಿದ ವ್ಯಕ್ತಿ; ಮುಂದೇನಾಯ್ತು ನೀವೇ ನೋಡಿ

Dubai Sheikh
Published on

ಪ್ರಯಾಗ್​ರಾಜ್​: ಜನವರಿ 13ರಿಂದ ಅರಂಭವಾಗಿರುವ ಮಹಾಕುಂಭಮೇಳಕ್ಕೆ (Maha Kumbh Mela) ದೇಶ, ವಿದೇಶಗಳಿಂದ ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿದ್ದು, ಹೊಸ ದಾಖಲೆಯನ್ನೇ ಬರೆದಿದೆ. ಪ್ರಮುಖವಾಗಿ ನಾಗಾಸಾಧುಗಳು ಹಾಗೂ ವಿದೇಶಿಗರು ಹೆಚ್ಚು ಗಮನವನ್ನು ಸೆಳೆಯುತ್ತಿದ್ದು, ಇದೀಗ ವ್ಯಕ್ತಿಯೊಬ್ಬರು ದುಬೈ ಶೇಖ್​ನಂತೆ (Dubai Sheikh) ಡ್ರೆಸ್​ ಮಾಡಿಕೊಂಡು ಜನರಿಂದ ಥಳಿತಕ್ಕೆ ಒಳಗಾಗಿರುವ ಘಟನೆ ಘಟನೆ ಬೆಳಕಿಗೆ ಬಂದಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ದುವೈ ಶೇಖ್​ನಂತೆ (Dubai Sheikh) ಡ್ರೆಸ್​ ಮಾಡಿಕೊಂಡಿರುವ ವ್ಯಕ್ತಿಯನ್ನು ಜನರು ಸುತ್ತುವರೆದಿದ್ದು, ಆತನನ್ನು ಥಳಿಸುತ್ತಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಸಾಧುಗಳು ರಕ್ಷಿಸುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಅನೇಕರು ವ್ಯಕ್ತಿಯ ನಡೆಯನ್ನು ಖಂಡಿಸಿದ್ದಾರೆ.

ಆಗಿದ್ದಾದರು ಏನು? 

ರಾಜಸ್ಥಾನದ ಮೂಲದ ವ್ಯಕ್ತಿಯೊಬ್ಬರು ರೀಲ್ಸ್​​ಗಾಗಿ ಶೇಖ್​ನಂತೆ (Dubai Sheikh) ಡ್ರೆಸ್​ ಮಾಡಿಕೊಂಡು ಕುಂಭಮೇಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈತನನ್ನು ನೋಡಿದ ಜನರು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಈತನ ಹೆಸರು ಕೇಳಿದಾಗ ಆತ ಶೇಖ್​ ಪ್ರೇಮಾನಂದ್ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಜನ ಆತನನ್ನು ಸುತ್ತುವರೆದು ಪ್ರಶ್ನಿಸಲು ಶುರು ಮಾಡಿದ್ದಾರೆ.

ಆತ ಸುಳ್ಳು ಹೇಳುತ್ತಿರುವುದನ್ನು ಮನಗಂಡ ಜನರು ವ್ಯಕ್ತಿಯನ್ನು ಥಳಿಸಲು ಶುರು ಮಾಡಿದ್ದು, ಬಳಿಕ ಆತ ಓಡಿ ಹೋಗಿದ್ದಾನೆ. ನಾಗಾಸಾಧುಗಳು ಆತನನ್ನು ರಕ್ಷಿಸಿದ್ದು, ಬಳಿಕ ರೀಲ್ಸ್​ಗಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಇದು ಕುಂಭಮೇಳ ಫ್ಯಾನ್ಸಿ ಡ್ರೆಸ್​ ಕಾಂಪಿಟೇಷನ್​ ಅಲ್ಲ ಎಂದು ನೆಟ್ಟಿಗರು ಕಮೆಂಟ್​ ಹಾಕಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net