ನೈಟ್‌ಕ್ಲಬ್‌ನಲ್ಲಿ ಬೆಂಕಿ ಅವಘಡ; 51 ಮಂದಿ ಮೃತ.. 100ಕ್ಕೂ ಹೆಚ್ಚು ಜನರಿಗೆ ಗಾಯ | Nightclub

Untitled design (1)
Published on

ಮೆಸಿಡೋನಿಯಾ: ಉತ್ತರ ಮೆಸಿಡೋನಿಯಾದ ದಕ್ಷಿಣ ಪಟ್ಟಣವಾದ ಕೊಕಾನಿಯಲ್ಲಿರುವ ನೈಟ್‌ಕ್ಲಬ್‌ನಲ್ಲಿ(Nightclub) ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದಲ್ಲಿ 51 ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕ್ಲಬ್‌ನಲ್ಲಿ ಸಂಗೀತ ಕಚೇರಿ ನಡೆಯುತ್ತಿದ್ದಾಗ ಪಟಾಕಿ ಸಿಡಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ನೈಟ್‌ಕ್ಲಬ್ ಪಲ್ಸ್‌ನಲ್ಲಿ ಪಾಪ್ ಗುಂಪಿನ ಸಂಗೀತ ಕಚೇರಿಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮೆಸಿಡೋನಿಯಾದ ಆಂತರಿಕ ಸಚಿವ ಪಾಂಚೆ ತೋಷ್ಕೋವ್ಸ್ಕಿ ತಿಳಿಸಿದ್ದಾರೆ. ಕ್ಲಬ್‌ಗೆ ಭೇಟಿ ನೀಡಿದ ಯುವಕರು ಪಟಾಕಿಗಳನ್ನು ಸಿಡಿಸಿದರು. ಇದರಿಂದಾಗಿ ಕ್ಲಬ್‌ನ ಛಾವಣಿಗೆ ಬೆಂಕಿ ಹೊತ್ತಿಕೊಂಡಿತು. ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತೋಷ್ಕೋವ್ಸ್ಕಿ ಹೇಳಿದರು. ಸಾಮಾಜಿಕ ಜಾಲತಾಣಲದ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕ್ಲಬ್ ಒಳಗಾಗಿರುವ ಅವ್ಯವಸ್ಥೆಯ ವಾತಾವರಣ ಗೋಚರಿಸುತ್ತಿದೆ.

ನೈಟ್‌ಕ್ಲಬ್‌ನಲ್ಲಿ ಉಂಟಾದ ಭಾರಿ ಬೆಂಕಿ ಶೀಘ್ರದಲ್ಲೇ ಕ್ಲಬ್‌ನ ಛಾವಣಿಗೆ ಹರಡಿತು, ಇದರಿಂದಾಗಿ ಬೆಂಕಿ ಮತ್ತಷ್ಟು ತೀವ್ರಗೊಂಡಿತು. ಸಂಗೀತ ಕಾರ್ಯಕ್ರಮದಲ್ಲಿ ಬೆಂಕಿ ಕಾಣಿಸಿಕೊಂಡಾಗ ಕ್ಲಬ್‌ನಲ್ಲಿ ಸುಮಾರು 1,500 ಜನರು ಇದ್ದರು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಕೊಕಾನಿಯ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net