

ಅಮೆರಿಕ: ನಾಸಾದ ಗಗನಯಾತ್ರಿ ಭಾರತೀಯ ಮೂಲದ ಸುನೀತ ವಿಲಿಯಮ್ಸ್(Sunita Williams) ತಮ್ಮ ಆರೋಗ್ಯದ ಮೇಲೆ ಎದಿದ್ದ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ವಿಡಿಯೋ ಸಂದರ್ಶನವೊಂದರಲ್ಲಿ ಬಾಹ್ಯಕಾಶ ನಿಲ್ದಾಣದ ಕಮಾಂಡರ್ ಮೂಲಕ ಮಾತನಾಡಿ, '' ನಾನು ಇಲ್ಲಿಗೆ ಬಂದಾಗ ತೂಕ ಎಷ್ಟು ಇತ್ತೊ ಅಷ್ಟೆ ಇದೆ. ತೂಕ ಕಡಿಮೆಯಾಗಿಲ್ಲ. ಸ್ನಾಯು ಮತ್ತು ಮೂಳೆ ಸಾಂದ್ರತೆಯ ಮೇಲೆ ಮೈಕ್ರೋಗ್ರಾವಿಟಿಯ ಪರಿಣಾಮ ಎದುರಿಸಲು ಗಗನಯಾತ್ರಿಗಳು ಅನುಸರಿಸುವ ಕಠಿಣ ವ್ಯಾಯಮದ ಕಟ್ಟುಪಾಡುಗಳಿಂದಾಗಿ ದೇಹದಲ್ಲಿ ಸಲ್ಪ ವ್ಯತ್ಯಾಸ ಕಂಡು ಬಂದಿದೆ'' ಎಂದು ಸುನೀತ ವಿವರಿಸಿದ್ದಾರೆ.
ಪ್ರತಿದಿನ ಟ್ರೇಡ್ ಮಿಲ್ ಮೇಲೆ ಓಡುವುದು, ವೆಟ್ಲಿಫ್ಟ್ ಸೇರಿದಂತೆ ಬೈಕ್ ರೈಡ್ ಮಾಡುವುದರಿಂದ ದೇಹದಲ್ಲಿ ಬದಲಾವಣೆ ಉಂಟಾಗಿದೆ. ನನ್ನ ತೊಡೆಗಳು ದಪ್ಪವಾಗಿವೆ, ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಮ್ಮ ದೈನಂದಿನ ದಿನಚರಿ ಬಗ್ಗೆ ಬಹಿರಂಗವಾಗಿ ಹೇಳುವ ಮೂಲಕ ಆರೋಗ್ಯದ ಕುರಿತು ಎದಿದ್ದ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ. ಡೈಲಿ ಮೈಲ್ ಮತ್ತು ನ್ಯೂಯಾರ್ಕ್ ಪೋಸ್ಟ್ನಂತಹ ಮಾಧ್ಯಮಗಳು ಸುನೀತ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ಪ್ರಶ್ನಿಸಿ ಪ್ರಕಟಿಸಿದ್ದವು,(ಏಜೆನ್ಸೀಸ್).