ಶೂನ್ಯ ಗುರುತ್ವದಲ್ಲಿ ಯೋಗ! ದುಬೈನ ಗಗನಯಾತ್ರಿಯ ಫೇವರಿಟ್ ಆಸನ ಯಾವುದು?

ISS Yoga
Published on

ನವದೆಹಲಿ: ವಾರ್ಷಿಕವಾಗಿ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ, ಪ್ರಪಂಚದಾದ್ಯಂತ ಜನರು ಬುಧವಾರ ಯೋಗವನ್ನು ಅಭ್ಯಾಸ ಮಾಡುತ್ತಾರೆ ಮತ್ತು ಆಸನಗಳನ್ನು ಮಾಡಿದರು. ಜಗತ್ತಿನ ಎಲ್ಲಾ ಭಾಗಗಳಲ್ಲಿ ಯೋಗಾಸನ ಮಾಡುತ್ತಿರುವ ಅಸಂಖ್ಯಾತ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೀವು ನೋಡಿರಬಹುದು. ಆದಾಗ್ಯೂ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಯೋಗ ಮಾಡುತ್ತಿರುವ ಗಗನಯಾತ್ರಿಯ ಈ ಫೋಟೋವನ್ನು ನೀವು ನೋಡಿದ್ದೀರಾ?

UAE ಯ ಗಗನಯಾತ್ರಿ ಮತ್ತು ಫ್ಲೈಟ್ ಇಂಜಿನಿಯರ್ ಸುಲ್ತಾನ್ ಅಲ್ ನೆಯಾಡಿ, ISSನಲ್ಲಿ ತಮ್ಮ ಫೇವರಿಟ್​ ಆಸನವಾದ ಪದ್ಮಾಸನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕಾಲು ಮಡಚಿ ಕುಳಿತು, ಕಣ್ಣು ಮುಚ್ಚಿದ್ದು ಮತ್ತು ಮುಖದ ಮೇಲೆ ಮಂದಹಾಸವನ್ನು ಇಟ್ಟುಕೊಂಡು ಪೋಸ್ ನೀಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

“ಇಂದು ಅಂತಾರಾಷ್ಟ್ರೀಯ ಯೋಗದಿನ. ನಾನು ಇಲ್ಲಿ ISS ನಲ್ಲಿ ಸ್ವಲ್ಪ ಯೋಗವನ್ನು ಅಭ್ಯಾಸ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ನೆಚ್ಚಿನ, ಯೋಗವು ದೇಹವನ್ನು ಬಲಪಡಿಸಿ ಮನಸ್ಸನ್ನು ಚುರುಕುಗೊಳಿಸುವ ಜತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ನೆಚ್ಚಿನ ಯೋಗ ಭಂಗಿ ಯಾವುದು?" ಎಂದು ಅವರು ಟ್ವಿಟರ್​ನಲ್ಲಿ ಬರೆದಿದ್ದಾರೆ.

"ಓಹ್, ಅದು ತುಂಬಾ ಆರಾಮದಾಯಕವಾಗಿದೆ" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ಯೋಗ ದಿನದ ಶುಭಾಶಯಗಳು ಪ್ರಿಯ ಸುಲ್ತಾನ್ ಅಲ್ ನೇಯಾದಿ ಜೀ, ನೀವು ಇಂದು ನಮಗೆ (ಯುಎಇ) ಹೆಮ್ಮೆ ಪಡುವಂತೆ ಮಾಡಿದ್ದೀರಿ" ಎಂದು 1995ರಿಂದ UAEನಲ್ಲಿ ನೆಲೆಸಿರುವ ಭಾರತೀಯ ವಲಸಿಗರೊಬ್ಬರು ಬರೆದಿದ್ದಾರೆ. "ನಿಮ್ಮ ಆ ಪೋಸ್​ ಮುದ್ದಾಗಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2014 ರಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಮೊದಲು ಪ್ರಸ್ತಾಪಿಸಿದರು. UN ಜನರಲ್ ಅಸೆಂಬ್ಲಿಯು 2014 ರಲ್ಲಿ ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net