ಯೋಗಾಭ್ಯಾಸದಿಂದ ಬುದ್ಧಿ ಚುರುಕು: ಯೋಗಗುರು ಶಂಕರನಾರಾಯಣಶಾಸ್ತ್ರಿ ಕಿವಿಮಾತು

1 (2)
Published on

ಮಂಡ್ಯ: ನಿರಂತರ ಯೋಗಾಭ್ಯಾಸದಿಂದ ಬುದ್ದಿ ಚುರುಕಾಗಿ ದೇಹ ಚೈತನ್ಯತೆಯಿಂದ ಕೂಡಿರುತ್ತದೆ ಎಂದು ಯೋಗಗುರು ಶಂಕರನಾರಾಯಣಶಾಸ್ತ್ರಿ ಹೇಳಿದರು.

ನಗರದ ಅಭಿನವ ಭಾರತಿ ವಿದ್ಯಾಕೇಂದ್ರದ ಪ್ರೌಢಶಾಲೆ ವಿಭಾಗ ಆಯೋಜಿಸಿದ್ದ ವಿಶ್ವ ಯೋಗದಿನಾಚರಣೆ ಮತ್ತು ಯೋಗ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿದಿಸೆಯಿಂದಲೇ ಯೋಗಾಭ್ಯಾಸ ಮಾಡುತ್ತಾ ಬಂದರೆ ಬುದ್ದಿ ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚಾಗಿ ಕಲಿಕೆಯ ಏಕಾಗ್ರತೆ ವೃದ್ದಿಸುತ್ತದೆ. ತನು ಮನ ಲವಲವಿಕೆಯಿಂದ ಇರುತ್ತದೆ. ಯೋಗ ನಮ್ಮ ಋಷಿಮುನಿಗಳ ಕೊಡುಗೆ ಎಂದು ನುಡಿದರು.

ಯೋಗ ಅನ್ನುವುದು ಒಂದು-ಎರಡು ದಿನ ಮಾಡಿ ಬಿಡುವುದಲ್ಲ. ಬದಲಿಗೆ ಸರ್ವದಿನವಿರಬೇಕು. ನಮ್ಮ ಉಸಿರಿರುವ ತನಕ ಇರಬೇಕು. ನಿತ್ಯ ನಿರಂತರ ಅಭ್ಯಾಸ ಮಾಡಬೇಕು. ದಿನ ಊಟ ಮಾಡುತ್ತೇವೆ, ದೈನಂದಿನ ಕೆಲಸ ಮಾಡುತ್ತೇವೆಯೋ ಯೋಗವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಬೇಕಿದೆ. ಅದನ್ನು ಬಿಡದೇ ಇರಕಾಗಲ್ಲ ಅನ್ನುವಷ್ಟರ ಮಟ್ಟಿಗೆ ಅಳವಡಿಸಿಕೊಳ್ಳಬೇಕು ಎಂದರು.

ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜಲಿಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net