ಈ ಅಕ್ಷರಗಳಿಂದ ಆರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟವಂತರಂತೆ! Astrology

Astrology
Published on

Astrology : ಜ್ಯೋತಿಷ್ಯವು ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಊಹಿಸಬಲ್ಲದು. ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ ಶಾಸ್ತ್ರ, ಜಾತಕ ಹಾಗೂ ಇತರ ಅಂಶಗಳ ಆಧಾರದ ಮೇಲೆ, ಯಾವುದೇ ವ್ಯಕ್ತಿ ದೊಡ್ಡವರಾದಾಗ ಏನು ಮಾಡುತ್ತಾರೆ ಅಥವಾ ಏನಾಗುತ್ತಾರೆ ಎಂಬುದನ್ನು ಊಹಿಸಬಹುದು. ಹೀಗಾಗಿ ಜ್ಯೋತಿಷ್ಯವನ್ನು ನಂಬುವ ಅನೇಕ ಮಂದಿ ನಮ್ಮ ನಡುವೆ ಇದಾರೆ.

ಕೇವಲ ಜಾತಕ ಮಾತ್ರವಲ್ಲ, ಹೆಸರುಗಳ ಮೊದಲ ಅಕ್ಷರಗಳನ್ನು ನೋಡುವ ಮೂಲಕವೂ ಭವಿಷ್ಯವನ್ನು ಅಂದಾಜಿಸಬಹುದು. ಉದಾಹರಣೆಗೆ, ಸೆಲೆಬ್ರಿಟಿಗಳು ತಮ್ಮ ಅದೃಷ್ಟಕ್ಕಾಗಿ ಅಥವಾ ಸಿನಿಮಾ ರಂಗದಲ್ಲಿ ಪ್ರಸಿದ್ಧಿ ಪಡೆಯಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಹ ಸಂದರ್ಭದಲ್ಲಿ ತಮ್ಮ ನಿಜವಾದ ಹೆಸರುಗಳನ್ನು ಮರೆಮಾಡುತ್ತಾರೆ ಮತ್ತು ಬೇರೆ ಹೆಸರಿನೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಇದು ಅವರ ಯಶಸ್ಸಿಗೆ ಒಂದು ಮಾರ್ಗವೂ ಆಗಿರಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗಾದರೆ, ಆ ಅಕ್ಷರಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಮೊದಲ ಅಕ್ಷರ ಡಿ (D)

ಹೆಸರಿನ ಮೊದಲ ಅಕ್ಷರ ಡಿ ಯಿಂದ ಆರಂಭವಾದರೆ, ಆ ಮಹಿಳೆಯರು ತುಂಬಾ ಅದೃಷ್ಟವಂತರು. ಅವರ ಸ್ವಭಾವವು ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ಅವರು ಸಂತೋಷ ಮತ್ತು ಪ್ರೀತಿಯಿಂದ ಕೂಡಿರುತ್ತಾರೆ. ಯಾವಾಗಲೂ ಐಷಾರಾಮಿ ಜೀವನವನ್ನು ನಡೆಸುತ್ತಾರೆ.

ಜಿ ಅಕ್ಷರ (G)

ಜಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ತಾವು ಬಯಸಿದ್ದನ್ನೆಲ್ಲ ಸಾಧಿಸುತ್ತಾರೆ. ಅವರು ಬಹಳಷ್ಟು ಹಣವನ್ನು ಹೊಂದಿರುವುದರಿಂದ ಬಡವರಿಗೆ ಸಹಾಯ ಮಾಡುತ್ತಾರೆ. ಬಡ ಕುಟುಂಬಕ್ಕೆ ಮದುವೆಯಾದರೂ, ಆ ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾರೆ. ಅವರು ತಮ್ಮ ಅತ್ತೆಯರನ್ನು ಚೆನ್ನಾಗಿ ನೋಡಿಕೊಳ್ಳುವ ಸೊಸೆಯಂದಿರಾಗಿರುತ್ತಾರೆ.

ಜೆ ಅಕ್ಷರ (J)

ಜೆ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ಇತರರೊಂದಿಗೆ ಸ್ನೇಹಪರರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅವರು ತಮ್ಮ ಗಂಡಂದಿರಿಗೆ ಅದೃಷ್ಟವನ್ನು ತರುತ್ತಾರೆ. ಏಕೆಂದರೆ ಅವರು ಎಲ್ಲರ ಹೃದಯಗಳನ್ನು ಗೆಲ್ಲುವ ರೀತಿಯ ವ್ಯಕ್ತಿಗಳಾಗಿರುತ್ತಾರೆ.

ಎಸ್​ ಅಕ್ಷರ (S)

ಎಸ್​ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಶ್ರಮಶೀಲರು. ಅವರಿಗೆ ಯಾವಾಗಲೂ ದೊಡ್ಡ ಮಹತ್ವಾಕಾಂಕ್ಷೆಗಳಿರುತ್ತವೆ. ಅವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಗಳನ್ನು ಸಾಧಿಸುತ್ತಾರೆ. ಅವರಿಗೆ ಸಾಕಷ್ಟು ಹಣ, ಧೈರ್ಯ ಮತ್ತು ಗೌರವವೂ ಸಿಗುತ್ತದೆ.

ವಿ ಅಕ್ಷರ (V)

ವಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳಿರುವ ಮಹಿಳೆಯರು ತುಂಬಾ ಅದೃಷ್ಟವಂತರು. ಅವರ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಚಿಂತನಶೀಲ ನಿರ್ಧಾರ ತೆಗೆದುಕೊಳ್ಳುವಿಕೆಯಂತಹ ಗುಣಗಳು ಅವರನ್ನು ಜೀವನದಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತವೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net