ಅಕ್ಷಯ ತೃತೀಯಕ್ಕೆ ದಿನಗಣನೆ; ಚಿನ್ನ ಖರೀದಿಗೆ ಶುಭ ಸಮಯ ಯಾವಾಗ ಗೊತ್ತಾ? Gold

Gold
Published on

Gold: ಚಿನ್ನದ ಹಬ್ಬ ಎಂದರೆ ನೆನಪಾಗೋದೆ ಅಕ್ಷಯ ತೃತೀಯ. ಹಿಂದೂ ಸಂಪ್ರದಾಯದ ಪ್ರಕಾರ ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಮೊದಲಿಂದಲೂ ರೂಡಿಯಲ್ಲಿರುವ ಸಂಪ್ರದಾಯವಾಗಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಒಳಿತಾಗುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಆ ದಿನ ಚಿನ್ನ ಖರೀದಿಸಲು ಶುಭ ಸಮಯ ಯಾವಾಗ ಎಂಬುದನ್ನು ತಿಳಿಯೋಣ.

ಅಕ್ಷಯ ತೃತೀಯ ಯಾವಾಗ?

2025ರ ಏಪ್ರಿಲ್ 30ರ ಬುಧವಾರದಂದು ಈ ವರ್ಷ ಅಕ್ಷಯ ತೃತೀಯ ದಿನವಾಗಿದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಬಹಳ ಶುಭ ದಿನವೆಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಹೊಸ ಕೆಲಸವನ್ನು ಪ್ರಾರಂಭಿಸುವುದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದರಿಂದ ಮನೆಗೆ ಶುಭವನ್ನು ತರುತ್ತದೆ ಎಂದು ನಂಬಲಾಗಿದೆ.

gold loan

ಪೂಜಾ ಮುಹೂರ್ತ

ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಬಾರಿಯ ಅಕ್ಷಯ ತೃತೀಯ 2025ರ ಏಪ್ರಿಲ್ 29 ರಂದು ಸಂಜೆ 05:31 ಕ್ಕೆ ಆರಂಭವಾಗಿ 2025ರ ಏಪ್ರಿಲ್ 30 ರಂದು ಮಧ್ಯಾಹ್ನ 02:12 ಕ್ಕೆ ಪೂರ್ಣಗೊಳ್ಳುತ್ತದೆ. 2025ರ ಏಪ್ರಿಲ್ 30 ರಂದು ಬೆಳಿಗ್ಗೆ 05:41 ರಿಂದ ಮಧ್ಯಾಹ್ನ 12:18 ರವರೆಗೆ ಅಕ್ಷಯ ತೃತೀಯ ಪೂಜಾ ಮುಹೂರ್ತ ಇರಲಿದೆ.

ಚಿನ್ನ ಖರೀದಿಗೆ ಶುಭ ಸಮಯ

ಅಕ್ಷಯ ತೃತೀಯದಂದು ಬೆಳಿಗ್ಗೆ 05.41 ರಿಂದ ಮಧ್ಯಾಹ್ನ 02.12 ರವರೆಗೆ ಚಿನ್ನ ಖರೀದಿಸಲು ಶುಭ ಸಮಯವಾಗಿದೆ.

ಅಕ್ಷಯ ತೃತೀಯದ ಮಹತ್ವ:

ಒಟ್ಟಾರೆಯಾಗಿ ಅಕ್ಷಯ ತೃತೀಯ ಒಂದು ಮಂಗಳಕರ ದಿನವಾಗಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಈ ದಿನದ 24 ಗಂಟೆಗಳ ಪ್ರತಿ ಕ್ಷಣವೂ ಪ್ರತಿಯೊಂದು ಕೆಲಸಕ್ಕೂ ಒಳ್ಳೆಯದು ಎನ್ನಲಾಗಿದೆ.

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯವು ಸಂತೋಷ, ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಭವಿಷ್ಯದಲ್ಲಿ ಹೆಚ್ಚಿನ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಈ ದಿನ ಖರೀದಿಸಿದ ಚಿನ್ನವು ಎಂದಿಗೂ ಕಡಿಮೆಯಾಗುವುದಿಲ್ಲ ಮತ್ತು ಯಾವಾಗಲೂ ಹೆಚ್ಚಾಗುತ್ತದೆ ಎಂಬುದು ನಂಬಿಕೆ.

ಅಕ್ಷಯ ತೃತೀಯದಂದು ಸೂರ್ಯ ಮತ್ತು ಚಂದ್ರರು ಪ್ರಕಾಶಮಾನವಾಗಿರುತ್ತಾರೆ ಎಂದು ನಂಬುತ್ತಾರೆ. ಇದು ವರ್ಷದ ಅಪರೂಪದ ದಿನವಾಗಿದ್ದು, ಈ ದಿನ ಬಹಳ ಅದೃಷ್ಟವನ್ನು ತರುತ್ತದೆ. ಹಾಗಾಗಿ, ಈ ದಿನದಂದು ಚಿನ್ನವನ್ನು ಖರೀದಿಸುವುದು ಕುಟುಂಬ ಅಥವಾ ವ್ಯವಹಾರಕ್ಕೆ ಅದೃಷ್ಟದ ಸಂಕೇತವಾಗಿದೆ. ಅಕ್ಷಯ ತೃತೀಯದ ದಿನ ಅನೇಕ ಜನರು ಚಿನ್ನದ ನಾಣ್ಯಗಳು ಅಥವಾ ಆಭರಣಗಳನ್ನು ಖರೀದಿಸುತ್ತಾರೆ. ಚಿನ್ನವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು/ ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು/ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net