ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಅಭಿವೃದ್ಧಿ ಆಗಲಿದೆ

astrology
Published on

ಮೇಷ: ಲೆಕ್ಕ ಪರಿಶೋಧಕರಿಗೆ ಹೆಚ್ಚಿದ ಒತ್ತಡ. ಪಾಲಕರಿಗೆ ಮಕ್ಕಳ ಭವಿಷ್ಯದ ಚಿಂತೆ. ಅಪರಿಚಿತರಿಂದ ಮೋಸವಾಗಬಹುದು.

ಶುಭಸಂಖ್ಯೆ: 9

ವೃಷಭ: ಸಹೋದ್ಯೋಗಿಗಳ ಸಹಾಯದಿಂದ ಹೆಸರು ಗಳಿಸುವಿರಿ. ಕುಲದೇವರನ್ನು ಭಕ್ತಿಯಿಂದ ಪೂಜಿಸಿ. ಬಡವರಿಗೆ ಸಹಾಯ ಮಾಡಿ. ಶುಭಸಂಖ್ಯೆ: 5

ಮಿಥುನ: ಗೃಹನಿರ್ವಣಕ್ಕೆ ಚಾಲನೆ. ವ್ಯರ್ಥ ಧನ ಹಾನಿ. ಕಿರುಚಿತ್ರ ಮತ್ತು ಚಲನಚಿತ್ರ ನಟರಿಗೆ ಶುಭದಿನ. ಕಚೇರಿ ಸ್ಥಳಾಂತರಕ್ಕೆ ನಿರ್ಧಾರ. ಶುಭಸಂಖ್ಯೆ:2

ಕಟಕ: ಪರರ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಚ್ಚರ. ಮಹಿಳೆಯರಿಗೆ ವಸ್ತ್ರ ಆಭರಣ ಲಾಭ. ಹೋಟೆಲ್ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2

ಸಿಂಹ: ಧಾರ್ವಿುಕ ಕ್ಷೇತ್ರದಲ್ಲಿ ಒಲವು. ಉನ್ನತ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

ಶುಭಸಂಖ್ಯೆ: 7

ಕನ್ಯಾ: ನವ ವಿವಾಹಿತ ದಂಪತಿಗಳಿಗೆ ಶುಭ ಸುದ್ದಿ. ಆಸ್ತಿ ವಿವಾದಕ್ಕೆ ಅಂತ್ಯ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟವಾಗುವುದು.

ಶುಭಸಂಖ್ಯೆ:1

ತುಲಾ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಪದವಿ ಕೈ ತಪ್ಪಲಿದೆ. ಸಾರ್ವಜನಿಕವಾಗಿ ಗೌರವ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 9

ವೃಶ್ಚಿಕ: ಉತ್ತಮ ಅವಕಾಶಗಳು ಕೈ ತಪ್ಪಲಿವೆ. ಆಸ್ತಿ ವಿವಾದಕ್ಕೆ ಹೊಸತಿರುವು . ಸಾಲ ತೀರಿಸಲು ಪತಿಯಿಂದ ಸಹಾಯ ಪಡೆಯುವಿರಿ. ಶುಭಸಂಖ್ಯೆ:3

ಧನುಸ್ಸು: ಯೋಗ ಶಿಕ್ಷಕರಿಗೆ ವಿಶೇಷ ದಿನ. ವಾದಕರು ಮತ್ತು ಗಾಯಕರಿಗೆ ವೇದಿಕೆ ಲಭ್ಯ. ಸಮಸ್ಯೆಯಿಂದ ವೀಸಾ ರದ್ದಾಗಲಿದೆ.

ಶುಭಸಂಖ್ಯೆ: 4

ಮಕರ: ಮೇಲಧಿಕಾರಿಗಳ ಸಹಾನುಭೂತಿ ಸಿಗಲಿದೆ. ನಿರ್ದೇಶಕರಿಗೆ ಆರ್ಥಿಕ ಲಾಭವಾಗುವುದು. ಮಾಟ ಮಂತ್ರದ ಭೀತಿ ಇರಲಿದೆ.

ಶುಭಸಂಖ್ಯೆ: 5

ಕುಂಭ:  ಸ್ವಯಂಕೃತ ಅಪರಾಧಕ್ಕೆ ಪಶ್ಚಾತ್ತಾಪ. ನಿಮ್ಮ ಇಷ್ಟದ ನಿವೇಶನ ದೊರೆತು ಸಂತಸ. ಶೈಕ್ಷಣಿಕ ಕ್ಷೇತ್ರದ ಸಿಬ್ಬಂದಿಗೆ ಪದವಿ ಸಿಗಲಿದೆ. ಶುಭಸಂಖ್ಯೆ:1

ಮೀನ: ಮೋಜು ಮಸ್ತಿಗೆ ವ್ಯಯ. ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡುವಿರಿ. ಆಧ್ಯಾತ್ಮಿಕ ಉನ್ನತಿ. ದಿನಾಂತ್ಯದಲ್ಲಿ ವಿಶೇಷ ಸುದ್ದಿ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net