ಶಿಕ್ಷಣ, ಆರೋಗ್ಯ ಇಲಾಖೆಗೆ ಸೌಲಭ್ಯದ ಭರವಸೆ

7 nrp 4 (1)
ಎನ್.ಆರ್.ಪುರದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಪಿ.ಆರ್.ಸದಾಶಿವ, ಬಿಂದು ಸತೀಶ್,ಡಿ.ಆರ್.ಶ್ರೀನಾಥ್, ಬಿನು,ಪ್ರವೀಣ್,ಪೂರ್ಣಿಮಾ ಇದ್ದರು.
Published on

ಎನ್.ಆರ್.ಪುರ: ಮುಂದಿನ ಐದು ವರ್ಷಗಳಲ್ಲಿ ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಗುರುವಾರ ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಮನಸ್ಸು ಅರಳುವುದಲ್ಲದೆ ಆರೋಗ್ಯವೂ ವೃದ್ದಿಸುತ್ತದೆ. ಇಂತಹ ಅವಕಾಶಗಳನ್ನು ಮಕ್ಕಳು ಬಳಿಸಿಕೊಳ್ಳಬೇಕು. ಎಲ್ಲ ಕ್ರೀಡೆಗಳಲ್ಲಿ ಮಕ್ಕಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಮಾತನಾಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2ನೇ ಹಂತದ ಕಾಮಗಾರಿ ಹಾಗೂ ಪ್ರಾಚಾರ್ಯರ ವಸತಿ ಗೃಹ, ಕ್ರೀಡಾಂಗಣದಲ್ಲಿ ಸ್ಟೇಡಿಯಂ, ರಂಗಮಂದಿರ ಅಗತ್ಯವಿದೆ. ಇದಕ್ಕೆ ಐದು ಕೋಟಿ ರೂ. ವೆಚ್ಚ ವಾಗಲಿದೆ. ಶಾಸಕರು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪಡೆಯಲು ತಾಲೂಕಿನ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ಟಿ.ಡಿ.ರಾಜೇಗೌಡರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್, ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ಬಿನು, ಪ್ರವೀಣ್,ಎಂ.ಟಿ.ಪ್ರವೀಣ್,ರಚಿತಾ ರಮೇಶ್, ಕೆ.ಅಣ್ಣಪ್ಪ, ವಿ.ಜೆ.ಬಿನು, ಯಾಸ್ಮಿನ್. ಉಮಾ, ಎನ್.ಡಿ.ಪ್ರಸಾದ್, ಸುನೀಲ್, ಬಿಇಒ ಕೆ.ಆರ್.ಪುಷ್ಪಾ, ಬಿ.ನಂಜುಂಡಪ್ಪ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಪೂರ್ಣಿಮ, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪ್ರಾಚಾರ್ಯ ಕೃಷ್ಣಮೂರ್ತಿ, ಕಟ್ಟೇಗೌಡ, ರಂಗಪ್ಪ,ದೇವರಾಜ್, ಧನಂಜಯ ಮೇಧೂರ, ರಮೇಶ್, ಪಿಡಿಒ ಸಂತೋಷ ಕುಮಾರ್, ಬಾಲಸುಬ್ರಮಣ್ಯಂ, ಅನುಸೂಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net