

ಬೆಂಗಳೂರು: ರಸ್ತೆಯಲ್ಲಿ ಹೋಗುವಾಗ ಎರಡು ಬೈಕ್‌ಗಳ ನಡುವೆ ಟಚ್ ಆದ ವಿಚಾರಕ್ಕೆ ಸವಾರನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಕುಂದನಹಳ್ಳಿ ನಿವಾಸಿ ರಾಕೇಶ್ (23) ಬಂಧಿತ ಸವಾರ. ಹಲ್ಲೆ ನಡೆಸಿದ ವಿಡಿಯೋ ಭಾನುವಾರ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ಆರೋಪಿಯನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.
ಫೆ. 1ರ ಸಂಜೆ 7 ಗಂಟೆಯಲ್ಲಿ ಎಚ್‌ಎಎಲ್ ಠಾಣಾ ವ್ಯಾಪ್ತಿಯ ಕುಂದನಹಳ್ಳಿ ಸಿಗ್ನಲ್‌ನಲ್ಲಿ ಆರೋಪಿ ರಾಕೇಶ್ ಚಲಾಯಿಸುತ್ತಿದ್ದ ಯಮಹಾ ಬೈಕ್‌ಗೆ ಯುವಕ, ಯುವತಿ ಹೋಗುತ್ತಿದ್ದ ಪಲ್ಸರ್ ಬೈಕ್ ಟಚ್ ಆಗಿದೆ. ಅಷ್ಟಕ್ಕೆ ಆಕ್ರೋಶಗೊಂಡ ರಾಕೇಶ್, ಪಲ್ಸರ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಕೈಯಿಂದ ಗುದ್ದಿ ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದ.
ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದರು. ವಿಡಿಯೋ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾದ ಬೈಕ್ ಸವಾರನ ಕಡೆಯಿಂದ ದೂರು ಪಡೆದು ಎ್ಐಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ.