ಡೇಟಿಂಗ್ ಹೋದವನ ಮೇಲೆ ಹಲ್ಲೆ

crime
Published on

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯನ್ನು ರಾತ್ರಿ ವೇಳೆ ಮನೆಗೆ ಕರೆಯಿಸಿಕೊಂಡು ಹಣ ಕೊಡುವಂತೆ ಒತ್ತಾಯಿಸಿ ನಾಲ್ವರು ಆರೋಪಿಗಳು ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಾಮಮೂರ್ತಿ ನಗರ ಎನ್‌ಐಆರ್ ಲೇಔಟ್ ಯುವಕನೋರ್ವ ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ನಾಲ್ವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಕೊಂಡು ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ.


ಹಲ್ಲೆಗೊಳಗಾಗಿರುವ ಯುವಕ ಸಲಿಂಗಕಾಮಿಯಾಗಿದ್ದು ಗ್ರಾೃಂಡರ್ ಡೇಟಿಂಗ್ ಆ್ಯಪ್‌ನಲ್ಲಿ ನೋಂದಾಯಿಸಿದ್ದ. ಇದೇ ಆ್ಯಪ್‌ನಲ್ಲಿ ಯುವಕನೋರ್ವ ಪರಿಚಯಿಸಿಕೊಂಡಿದ್ದ. ಪೋನ್ ನಂಬರ್ ಪಡೆದು ತಾವರೆಕೆರೆಯಲ್ಲಿರುವ ಮನೆಗೆ ಬರುವಂತೆ ಜ.೧೦ ರಂದು ಅಪರಿಚಿತ ಆರೋಪಿಯೋರ್ವ ಆಹ್ವಾನಿಸಿದ್ದ. ಅದರಂತೆ ಅಂದು ಆರೋಪಿಯ ಮನೆಗೆ ಆತ ಹೋಗಿದ್ದ. ಈ ವೇಳೆ ಆರೋಪಿ ಮನೆಯಲ್ಲಿ ಇನ್ನೂ ಮೂವರು ಉಳಿದುಕೊಂಡಿದ್ದರು. ಈ ವೇಳೆ ಹಣ ನೀಡುವಂತೆ ನಾಲ್ವರು ಒತ್ತಾಯಿಸಿದ್ದಾರೆ. ಹಣವಿಲ್ಲ ಎಂದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕೈಗಳಿಂದ ಮತ್ತು ಬೆಲ್ಟ್ನಿಂದ ಹೊಡೆದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹೊಸೂರು ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜ.೧೨ ರಂದು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net