ಅಸ್ಸಾಂ ಪ್ರವಾಹ ಹೊಡೆತಕ್ಕೆ 5.5 ಲಕ್ಷಕ್ಕೂ ಅಧಿಕ ಜನರ ಬದುಕು ಅತಂತ್ರ! ಸಾವಿನ ಸಂಖ್ಯೆ 36ಕ್ಕೆ ಏರಿಕೆ | Assam Floods

ವಿಜಯವಾಣಿ (16)
Published on

Assam Floods: ಅಸ್ಸಾಂ ರಾಜ್ಯದ ಈಶಾನ್ಯ ಭಾಗದಲ್ಲಿನ ಭೀಕರ ಪ್ರವಾಹ ಜನರ ಜೀವನವನ್ನು ಸಂಪೂರ್ಣ ಅತಂತ್ರಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ಹಲವರು ಮೃತಪಟ್ಟಿದ್ದು, ಇದೀಗ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿದೆ. ಬರೋಬ್ಬರಿ 5.5 ಲಕ್ಷಕ್ಕೂ ಅಧಿಕ ಜನರು ಪ್ರವಾಹದ ಸುಳಿಗೆ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಅಸ್ಸಾಂನಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ಅರುಣಾಚಲ ಪ್ರದೇಶದಲ್ಲಿ 10, ಮೇಘಾಲಯದಲ್ಲಿ ಆರು, ಮಿಜೋರಾಂನಲ್ಲಿ ಐದು, ಸಿಕ್ಕಿಂನಲ್ಲಿ ಮೂರು ಮತ್ತು ತ್ರಿಪುರದಲ್ಲಿ ಒಂದು ಸಾವು ದಾಖಲಾಗಿದೆ.

ಅಸ್ಸಾಂ ಜನಜೀವನ ಅತಂತ್ರ

ಅಸ್ಸಾಂನ ಒಟ್ಟು 22 ಜಿಲ್ಲೆಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಜನರ ಬದುಕು ಅತಂತ್ರವಾಗಿದೆ. ವರದಿಗಳ ಪ್ರಕಾರ, ಹದಿನೈದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳಲ್ಲಿ ಒಂದಾದ ಲಖಿಂಪುರಕ್ಕೆ ಭೇಟಿ ನೀಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಸ್ಥಳೀಯ ನಿವಾಸಿಗಳಿಗೆ ಸಂಪೂರ್ಣ ಬೆಂಬಲ ಒದಗಿಸುವ ಭರವಸೆ ನೀಡಿದ್ದಾರೆ. ನಿರಂತರ ಮಳೆಯಿಂದಾಗಿ ರಸ್ತೆ, ರೈಲು ಸಂಚಾರ ಮತ್ತು ದೋಣಿ ಸೇವೆಗಳು ತಾತ್ಕಾಲಿಕವಾಗಿ ರದ್ದಾಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net