

ಹೈದರಾಬಾದ್: ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿಪಿ ಸಿಂಗ್ ಅವರ ಮಗಳು ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಐಪಿಎಸ್ ತರಬೇತಿ ಮುಗಿಸಿ, ಪದವಿ ಪಡೆದು ಹೊರ ಬಂದಿದ್ದಾರೆ. ಇದೀಗ ನಿರ್ಗಮನ ಪಥಸಂಚಲನದ ದಿನ ಮಗಳು ಐಶ್ವರ್ಯ ತನಗೆ ಸೆಲ್ಯೂಟ್ ಮಾಡುತ್ತಿರುವ ವೀಡಿಯೋವನ್ನು ಡಿಜಿಪಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗೆ ಪಡೆದುಕೊಳ್ಳುತ್ತಿದೆ. ಮಗಳು ತಂದೆಗೆ ಸೆಲ್ಯೂಟ್ ಮಾಡುತ್ತಿರುವು ಈ ವೀಡಿಯೋವನ್ನು ಟ್ವಟಿರ್ನಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಅಪ್ಪ-ಮಗಳಿಗೆ ಇದೊಂದು ಹೆಮ್ಮೆಯ ದಿನ. ತಮ್ಮ ಮಕ್ಕಳು ತನಗಿಂತ ಎತ್ತರಕ್ಕೇರಲು ಆಶೀರ್ವದಿಸುವುದು ತಂದೆ ಮಾತ್ರ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅಲ್ಲದೇ, ಐಪಿಎಸ್ ಐಶ್ವರ್ಯಾ ಸಾಧನೆ ಮಾಡಬೇಕೆಂದು ಕನಸು ಕಾಣುವ ಪ್ರತಿಯೊಬ್ಬರಿಗೂ ಮಾದರಿಯಾಗಿ ಕಾಣಿಸುತ್ತಿದ್ದಾರೆ. ಅವರ ಐಪಿಎಸ್ ಹಾದಿಗೆ ಶುಭವಾಗಲಿ ಎಂದು ಅನೇಕರು ಹಾರೈಸಿದ್ದಾರೆ.