'ಮಹಾಭಾರತದಲ್ಲೂ ಲವ್ ಜಿಹಾದ್ ನಡೆದಿದೆ' ಎಂದ ಕಾಂಗ್ರೆಸ್‌ನ ಭೂಪೇನ್ ಬೋರಾ​!

Untitled design - 2023-07-28T085134.424
Published on

ಅಸ್ಸಾಂ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥ ಭೂಪೇನ್ ಬೋರಾ “ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ” ಎಂದು ನೀಡಿದ ಹೇಳಿಕೆಯ ವಿರುದ್ಧ ಇದೀಗ ನೇರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಭೂಪೇನ್ ಬೋರಾ, “ಕೃಷ್ಣನು ರುಕ್ಮಿಣಿಯನ್ನು ಮದುವೆಯಾಗಲು ಬಯಸಿದಾಗ, ಅರ್ಜುನನು ಮಹಿಳೆಯ ವೇಷ ಧರಿಸಿ ಬಂದಿದ್ದನು. ಮಹಾಭಾರತದಲ್ಲೂ ಲವ್ ಜಿಹಾದ್ ಇತ್ತು" ಎಂದು ಹೇಳಿಕೆ ನೀಡಿದ್ದರು. ಬೋರಾ ಹೇಳಿಕೆಯನ್ನು ಖಂಡಿಸಿದ ಸಿಎಂ ಹಿಮಂತ ಶರ್ಮಾ, "ಈ ಹೇಳಿಕೆ ಸನಾತನ ಮತ್ತು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಶ್ರೀಕೃಷ್ಣ ಮತ್ತು ರುಕ್ಮಿಣಿ ವಿಷಯವನ್ನು ಎಳೆದು ತರುವುದು ಅಕ್ಷಮ್ಯ. ಇದು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ" ಎಂದು ಹೇಳಿದರು.

"ಹಜರತ್ ಮುಹಮ್ಮದ್ ಅಥವಾ ಜೀಸಸ್ ಕ್ರೈಸ್ಟ್ ಅನ್ನು ಯಾವುದೇ ವಿವಾದಕ್ಕೆ ಎಳೆಯಬಾರದು, ಅದೇ ರೀತಿ ಶ್ರೀ ಕೃಷ್ಣನನ್ನು ಯಾವುದೇ ವಿವಾದಕ್ಕೆ ಕರೆತರುವುದು ಒಳಿತಲ್ಲ ಎಂದು ನಾನು ಕಾಂಗ್ರೆಸ್‌ಗೆ ಹೇಳಲು ಬಯಸುತ್ತೇನೆ. ದೇವರನ್ನು ಕ್ರಿಮಿನಲ್ ಚಟುವಟಿಕೆಗೆ ಹೋಲಿಸುವುದು ಒಪ್ಪುವಂತದ್ದಲ್ಲ. ಈ ಹೇಳಿಕೆ ಕುರಿತು ಯಾರಾದರೂ ಕೇಸು ದಾಖಲಿಸಿದರೆ ಅವರನ್ನು ಬಂಧಿಸಬೇಕಾಗುತ್ತದೆ. ಸನಾತನ ಧರ್ಮದ ಸಾವಿರಾರು ಮಂದಿ ದೂರು ನೀಡಿದರೆ, ಆಗ ಆತನನ್ನು ಉಳಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಬೋರಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅಸ್ಸಾಂ ಸಿಎಂ, "ಭಗವಾನ್ ಕೃಷ್ಣನು ರುಕ್ಮಿಣಿಗೆ ತನ್ನ ಧರ್ಮವನ್ನು ಬದಲಾಯಿಸಲು ಎಂದಿಗೂ ಒತ್ತಾಯಿಸಲಿಲ್ಲ. ಹುಡುಗಿಯನ್ನು ಸುಳ್ಳು ಗುರುತಿನ ನೆಪದಲ್ಲಿ ಮದುವೆಯಾಗಿ ನಂತರ ಬಲವಂತವಾಗಿ ಧರ್ಮ ಬದಲಾಯಿಸಿದರೆ ಅದನ್ನು ಲವ್ ಜಿಹಾದ್ ಎನ್ನುತಾರೆ" ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net