

ಬೆಂಗಳೂರು: ಎಎಸ್ಆರ್ಬಿ (ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ) ಅಧಿಕೃತ ಅಧಿಸೂಚನೆ ಮೂಲಕ ಪ್ರಿನ್ಸಿಪಾಲ್ ಸೈಂಟಿಸ್ಟ್, ಸೀನಿಯರ್ ಸೈಂಟಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟಂಬರ್ 08 ರ ಒಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು:368
ಸ್ಥಳ: ಭಾರತಾದ್ಯಂತ
ವೇತನ: ಪ್ರತಿ ತಿಂಗಳು 131400-2182000 ರೂ.
ಹುದ್ದೆಯ ವಿವರ
*ಪ್ರಿನ್ಸಿಪಾಲ್ ಸೈಂಟಿಸ್ಟ್- 80
*ಸೀನಿಯರ್ ಸೈಂಟಿಸ್ಟ್- 288
ವಿದ್ಯಾರ್ಹತೆ
ಪ್ರಿನ್ಸಿಪಾಲ್ ಸೈಂಟಿಸ್ಟ್-ಪೋಸ್ಟ್ ಗ್ರಾಜುಯೇಷನ್, ಸ್ನಾತಕೋತ್ತರ ಪದವಿ, ಪಿಎಚ್ಡಿ
ಸೀನಿಯರ್ ಸೈಂಟಿಸ್ಟ್-ಪಿಎಚ್ಡಿ
ವಯೋಮಿತಿ
ಪ್ರಿನ್ಸಿಪಾಲ್ ಸೈಂಟಿಸ್ಟ್-52
ಸೀನಿಯರ್ ಸೈಂಟಿಸ್ಟ್-47
ವಯೋಸಡಿಲಿಕೆ
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ನಿಯಮಗಳ ಪ್ರಕಾರ
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳೆಯರು-ಶುಲ್ಕ ವಿನಾಯಿತಿ
ಇತರ ಅಭ್ಯರ್ಥಿಗಳು- 1500ರೂ.
ಪಾವತಿಸುವ ವಿಧಾನ-ಆನ್ಲೈನ್
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವೇತನ
ಪ್ರಿನ್ಸಿಪಾಲ್ ಸೈಂಟಿಸ್ಟ್- 144200-218200/-
ಸೀನಿಯರ್ ಸೈಂಟಿಸ್ಟ್-131400-217100/-
ಅರ್ಜಿ ಸಲ್ಲಿಸುವ ವಿಧಾನ
*ಮೊದಲನೆಯದಾಗಿ ASRB ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ.
*ಆನ್ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
*ASRB ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಪ್ಲೋಡ್ ಮಾಡಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
*ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
ಅರ್ಜಿ ಸಲ್ಲಿಕೆ ಪ್ರಾರಂಭ: 18-08-2023
ಅರ್ಜಿ ಸಲ್ಲಿಕೆಗೆ ಹಾಗೂ ಶುಲ್ಕ ಪಾವತಿಸಲು ಕೊನೇ ದಿನ: 8-09-2023
ಹೆಚ್ಚಿನ ಮಾಹಿತಿಗಾಗಿ: asrb.org.in
ಸೂಚನೆ
ಯಾವುದೇ ಮಾಹಿತಿ/ಸ್ಪಷ್ಟೀಕರಣ/ಮಾರ್ಗದರ್ಶನಕ್ಕಾಗಿ ಅಭ್ಯರ್ಥಿಯು ASRB, KAB – I, Pusa, New Delhi ಕಚೇರಿಯನ್ನು 25840251 Extn 204 ನಲ್ಲಿ ಸಂಪರ್ಕಿಸಬಹುದು.
ಪ್ರಶ್ನೆಗಳನ್ನು ಇ-ಮೇಲ್ ಮೂಲಕ query@asrb.org.in ಗೆ ಕಳುಹಿಸಬಹುದು.