ಸೇನಾಧಿಕಾರಿ ಹೆಸರಿನಲ್ಲಿ ಬಾಡಿಗೆ ಮನೆ ಕೇಳಿ ವಂಚನೆ

Huge Fraud
Published on

ಬೆಂಗಳೂರು: ಬಾಡಿಗೆ ಮನೆ ಬೇಕೆಂದು ಆರ್ಮಿ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಕಟ್ಟಡ ಮಾಲೀಕರ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು 1 ಲಕ್ಷ ರೂ. ಕನ್ನ ಹಾಕಿದ್ದಾರೆ.

ಬನಶಂಕರಿ 1ನೇ ಹಂತ ನಿವಾಸಿ ಜೆ.ಎಸ್. ಶ್ರೀನಿವಾಸ್, ಈ ಕುರಿತು ದಕ್ಷಿಣ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಿವಾಸ್ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಆರ್ಮಿ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿಗೆ ವರ್ಗಾವಣೆ ಆಗಿದೆ. ನನಗೆ ಬಾಡಿಗೆ ಮನೆ ಬೇಕಾಗಿದೆ. ನಿಮಗೆ ಮಿಲಟರಿ ಕಚೇರಿಯಿಂದ ಕರೆ ಮಾಡಿ ಮುಂಗಡ ಹಣ ಜಮೆ ಮಾಡುತ್ತಾರೆ ಎಂದು ಹೇಳಿ ಕರೆ ಸ್ಥಗಿತ ಮಾಡಿದ್ದಾನೆ.

ಸ್ವಲ್ಪ ಹೊತ್ತಿಗೆ ರವಿಕುಮಾರ್ ಎಂಬಾತ ಶ್ರೀನಿವಾಸ್‌ಗೆ ಕರೆ ಮಾಡಿ ಆರ್ಮಿ ಕಚೇರಿಯಿಂದ ಕರೆ ಮಾಡಿದ್ದೆನೆ. ಬಾಡಿಗೆ ಮನೆ ಮುಂಗಡ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಿದೆ. ಅದಕ್ಕೂ ಮೊದಲು ನೀವು ಆರ್ಮಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದರೇ ವಾಪಸ್ ಷರತ್ತು ಮುಗಿದ ಮೇಲೆ ವಾಪಸ್ ಹಣ ವರ್ಗಾವಣೆ ಮಾಡುತ್ತೆವೆ ಎಂದು ಹೇಳಿ ಬ್ಯಾಂಕ್ ವಿವರ ಕೊಟ್ಟಿದ್ದಾರೆ.

ಇದನ್ನು ನಂಬಿದ ಶ್ರೀನಿವಾಸ್, ಸೈಬರ್ ವಂಚಕರು ಕೊಟ್ಟ ಬ್ಯಾಂಕ್ ಖಾತೆಗೆ ಹಣ ಹಂತವಾಗಿ 1 ಲಕ್ಷ ರೂ. ಹಣ ಜಮೆ ಮಾಡಿದ್ದಾರೆ. ವಾಪಸ್ ಮಾತ್ರ ಬರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net