ಏಷ್ಯಾದ ಅತೀದೊಡ್ಡ ಶೃಂಗಸಭೆ ಫಲಪ್ರದ ಸಂಪನ್ನ

Published on

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರು ಅರಮನೆಯಲ್ಲಿ ನಡೆದ ಟೆಕ್ ಶೃಂಗಸಭೆ ವಿವಿಧ ಆಯಾಮದಲ್ಲಿ ಲಪ್ರದವಾಗುವುದರೊಂದಿಗೆ ಸಂಪನ್ನಗೊಂಡಿತು.

ಟೆಕ್ ತಜ್ಞರು, ಉದ್ಯಮಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹೀಗೆ ವಿವಿಧ ವರ್ಗದವರ ಸಮ್ಮಿಳಿತದ ಶೃಂಗಸಭೆಯಲ್ಲಿ 51 ದೇಶಗಳು, 21 ದೇಶಗಳ ನಿಯೋಗ ಮತ್ತು 521 ಜಾಗತಿಕ ಸ್ಪೀಕರ್‌ಗಳ ಭಾಗವಹಿಸಿ ಸ್ಟಾರ್ಟ್‌ಅಪ್‌ಗಳ ಅಭಿವೃದ್ಧಿ, ಪಾಲುದಾರಿಕೆ, ಉದ್ಯಮಶೀಲತೆಗೆ ಭದ್ರಬುನಾದಿ ಹಾಕುವ ಪ್ರಯತ್ನ ಮಾಡಿದರು.

3.5 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಇಟ್ಟುಕೊಂಡ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಹೊಂದಿದ ಕರ್ನಾಟಕ ಜಿಸಿಸಿ ನೀತಿ ಬಿಡುಗಡೆ, ಬಾಹ್ಯಾಕಾಶ ಮಾರುಕಟ್ಟೆಯನ್ನು ಶೇ.50ರಷ್ಟು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಉದ್ದೇಶದ ಬಾಹ್ಯಾಕಾಶ ನೀತಿ ಶೃಂಗ ಸಭೆಯ ಪ್ರಮುಖ ಮೈಲಿಗಲ್ಲುಗಳು.

ಹಾಗೆಯೇ, ಕರ್ನಾಟಕದ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯ ಸಹಕಾರ ಮತ್ತು ಉತ್ತೇಜನದ ಕುರಿತು ಐಟಿಬಿಟಿ ಇಲಾಖೆ ನಡುವೆ ಒಡಂಬಡಿಕೆ, ಒಂದು ಲಕ್ಷ ಪ್ರಶಿಕ್ಷಣಾರ್ಥಿಗಳಿಗೆ ತರಬೇತು ನೀಡುವ ನಿಪುಣ ಕರ್ನಾಟಕ ಯೋಜನೆ ೋಷಣೆ, ಡಿಜಿಟಲ್ ಆರೋಗ್ಯ ಸಹಯೋಗವನ್ನು ಮುನ್ನಡೆಸಲು ಹೆಲ್ತ್ ಟೆಕ್‌ಹಬ್ ಕೋಪನ್‌ಹೇಗನ್‌ನೊಂದಿಗೆ ಜಂಟಿ ಸಹಯೋಗ ೋಷಣೆ, ಐಐಟಿ ಅಲುಮ್ನಿ ಸೆಂಟರ್ ಬೆಂಗಳೂರು ಜತೆಗೆ ಎಐನಲ್ಲಿ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ೋಷಣೆ, ಕರ್ನಾಟಕದಲ್ಲಿ ಆಳವಾದ ತಾಂತ್ರಿಕ ಸಾಮರ್ಥ್ಯ ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಇನ್ನೋವರ್ಸ್ ಎಂಬ ನಾವೀನ್ಯತೆ ಕ್ಯಾಂಪಸ್ ಉದ್ಘಾಟನೆ ಟೆಕ್ ಸಮ್ಮಿಟ್‌ನಲ್ಲಾದ ಪ್ರಮುಖ ಸಂಗತಿಗಳಾಗಿದ್ದವು.

ಹೂಡಿಕೆದಾರರ ಸಂಪರ್ಕಕ್ಕೆ ಮೇಳ ಸಾಕ್ಷಿಯಾಯಿತು. ಮೂರು ದಿನಗಳಲ್ಲಿ 100ಕ್ಕೂ ಹೆಚ್ಚು ಹೂಡಿಕೆದಾರರಿಗೆ 300 ಪ್ಸಲ್ ಸ್ಟಾರ್ಟ್‌ಅಪ್‌ಗಳನ್ನು ಪಿಚ್ ಮಾಡಲಾಗಿದೆ. 300 ಸ್ಟಾರ್ಟ್‌ಅಪ್‌ಗಳಲ್ಲಿ 23 ಸ್ಟಾರ್ಟ್‌ಅಪ್‌ಗಳು ಕಲ್ಪನೆಯ ಹಂತದಿಂದ, 75 ಪರಿಕಲ್ಪನೆ ಮೌಲ್ಯೀಕರಣ ಹಂತದಿಂದ, 140 ಆರಂಭಿಕ ಹಂತದಿಂದ ಮತ್ತು 80 ಬೆಳವಣಿಗೆಯ ಹಂತದಿಂದ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net