

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ಹಿಂಸಾತ್ಮಕ ಘಟನೆಗಳು ಆಗಾಗ ಕೇಳಿ ಬರುತ್ತವೆ. ಅದಕ್ಕೆ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೆಲವು ಬಿಳಿಯರು ಆಗಾಗ ಕಪಿಚೇಷ್ಟೆ ಮಾಡುತ್ತಾನೆ ಇರುತ್ತಾರೆ.
ಇಂತಹದೇ ಒಂದು ಘಟನೆ ಗುರುವಾರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ನಡೆದಿದೆ. ಸಿಗ್ನಲ್ ಒಂದರ ಬಳಿ ಸಿಗ್ನಲ್ ಕ್ರಾಸ್ ಮಾಡಲು ನಿಂತಿದ್ದ ಏಷಿಯಾ ಮೂಲದ ಜಿಯೊ ಜಿನ್ ಜಿ ಎನ್ನುವ 75 ವರ್ಷದ ಮಹಿಳೆ ನಿಂತಿದ್ದಳು. ಅವಳ ಬಳಿನೇ ಹೋಗುತ್ತಿದ್ದ ಸ್ಟಿವನ್ ಜೆನ್ಕಿನ್ಸ್ ಎನ್ನುವ ಅಮೆರಿಕದ ಬಿಳಿಯ ವ್ಯಕ್ತಿ ಈ ಮುದುಕಿಯನ್ನು ನೋಡಿ ಕುಚೇಷ್ಟೆ ಮಾಡಿದ್ದಾನೆ. ಅಲ್ಲದೇ ಅವಳ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ.
ಇದರಿಂದ ಕುಪಿತಗೊಂಡ ಆ ಅಜ್ಜಿ ಕಟ್ಟಿಗೆಯೊಂದರಿಂದ ಆತನ ಮುಖಕ್ಕೆ ಹೊಡೆದಿದ್ದಾಳೆ. ಅಲ್ಲದೇ ಅವನ ಮೇಲೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಅಜ್ಜಿಯ ಒಂದೇ ಹೊಡೆತಕ್ಕೆ ಸ್ಟಿವನ್ ಗೆ ಬಾಯಿ ತುಂಬ ರಕ್ತ ಬಂದಿದೆ. ಕೂಡಲೇ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಬಂದು ಜಗಳ ಬಿಡಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸ್ಟಿವನ್ನ್ನು ಆಸ್ಪತ್ರೆಗೆ ದಾಖಲಿಸಿ ಅವನ ಮೇಲೆ ಜನಾಂಗೀಯ ತಾರತಮ್ಯ, ಹಲ್ಲೆ ಕೇಸ್ ಹಾಕಲಾಗಿದೆ. ಮುದುಕಿಯ ದೈರ್ಯ ನೋಡಿ ಪೊಲೀಸ್ ಸಿಬ್ಬಂದಿ ನಿಬ್ಬೆರಗಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೇನ್ಸಿಸ್).