ಮುಡಾಗೆ ಹಿಂದಿರುಗಿಸಿರುವ ಸೈಟುಗಳನ್ನು ವಾಪಸ್ ಪಡೆಯಲಿ; ಸಿಎಂ ಸಿದ್ದರಾಮಯ್ಯಗೆ ಅಶೋಕ ಸವಾಲು | Muda

dk - 2025-03-09T201211.240
Published on

Muda: ಮುಡಾಗೆ ಹಿಂದಿರುಗಿಸಿರುವ ಸೈಟುಗಳನ್ನು ಮುಂದಿನ ಬಜೆಟ್​ ಮಂಡಿಸುವ ಮುನ್ನ ವಾಪಸ್ಸು ಪಡೆಯಲಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್​. ಅಶೋಕ ಸವಾಲೆಸೆದಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಆರ್​.ಅಶೋಕ, '' ಜಾರಿ ನಿರ್ದೇಶನಾಲಯ (ಇ.ಡಿ.) ಬಂಧನದಿಂದ ತಪ್ಪಿಸಿಕೊಳ್ಳಲು ಮುಡಾದಿಂದ ಅಕ್ರಮವಾಗಿ ಪಡೆದ 14 ಸೈಟುಗಳನ್ನು ವಾಪಸ್ಸು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಕುಟುಂಬ, ಈಗ ಸೈಟುಗಳನ್ನು ವಾಪಸ್ಸು ಪಡೆಯುವ ಮಾತಾಡುತ್ತಿದೆ'' ಎಂದಿದ್ದಾರೆ.

ಸಿಎಂ ನಿಮಗೆ ನನ್ನದೊಂದು ಸವಾಲು. ನಿಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯ ಯತಿಂದ್ರ ಅವರು ಮೂಡಾದಿಂದ 14 ಸೈಟುಗಳನ್ನು ವಾಪಸ್ಸು ಪಡೆಯುತ್ತೇವೆ, ಅದು ನಮಗೇ ಸೇರಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀವು 16 ಬಜೆಟ್ ಅಲ್ಲ, 19 ಬಜೆಟ್ ಮಂಡಿಸುತ್ತೀರಿ ಎಂದೂ ಕೂಡ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ನಿಜವಾಗಿಯೂ ಸತ್ಯವಂತರಾಗಿದ್ದಾರೆ, ಪ್ರಾಮಾಣಿಕರಾಗಿದ್ದರೆ, ಸ್ಟ್ರಾಂಗ್ ಮುಖ್ಯಮಂತ್ರಿ ಆಗಿದ್ದರೆ, ಮುಂದಿನ ಬಜೆಟ್ ಮಂಡಿಸುವ ಮುನ್ನ ಮುಡಾಗೆ ಹಿಂದಿರುಗಿಸಿರುವ ಸೈಟುಗಳನ್ನು ವಾಪಸ್ಸು ಪಡೆಯಲಿ. ಇದು ನನ್ನ ಸವಾಲು. ಇದಕ್ಕೆ ಸಿದ್ದರಾಮಯ್ಯನವರು ಒಪ್ಪುತ್ತರಾ? ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net