ಕಪ್ಪು ಸೀರೆಯಲ್ಲಿ ಮಿಂಚಿದ ಮಿಲ್ಕಿಬ್ಯೂಟಿ ಆಶಿಕಾ ರಂಗನಾಥ್; ನಿಮ್ಮನ್ನು ನೋಡಿಯೇ ಈ ಹಾಡು ಬರೆದಿರುವುದು ಎಂದ ನೆಟ್ಟಿಗರು

Ashika Ranganath
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ವೈಟ್​ ಬ್ಯೂಟಿ ಎಂದೇ ಹೆಸರುವಾಸಿಯಾಗಿರುವ ನಟಿ ಆಶಿಕಾ ರಂಗನಾಥ್​ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂದಲ್ಲಿ ಬ್ಯುಸಿ ಆಗಿದ್ಧಾರೆ. ನಂದಮೂರಿ ಕಲ್ಯಾಣ್​ರಾಮ್​ ನಟನೆಯ ಅಮಿಗೋಸ್ ಚಿತ್ರದ ಮೂಲಕ ಟಾಲಿವುಡ್​ ಪ್ರವೇಶಿಸಿದ ಅವರು ಇದೀಗ ಅಕ್ಕಿನೇನು ನಾಗಾರ್ಜುನ ನಟನೆಯ ನಾ ಸಾಮಿ ರಂಗ ಸಿನಿಮಾದಲ್ಲಿ ನಟಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರ ತೆರೆ ಕಾಣುತ್ತಿದ್ದು, ಇತ್ತೀಚಿಗೆ ನಡೆದ ಪ್ರೀ ರಿಲೀಸ್​ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿತ್ತು. ಪ್ರೀ ರಿಲೀಸ್​ ಕಾರ್ಯಕ್ರಮದಲ್ಲಿ ಕಪ್ಪು ಸೀರೆಯುಟ್ಟು ಮಿಂಚಿದ್ದ ಮಿಲ್ಕಿಬ್ಯೂಟಿ ಆಶಿಕಾ ಅದರ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Ashika Ranganath

ಕಪ್ಪು ಬಣ್ಣದ ಬಣ್ಣದ ಡಿಸೈನರ್​ ಸೀರೆಯುಟ್ಟು ಪೋಸ್​ ನೀಡಿರುವ ಆಶಿಕಾ ಅವರ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದು, ಇವರನ್ನು ನೋಡಿಯೇ ಸೀರೆಲಿ ಹುಡುಗಿರ ನೋಡಲೆ ಬಾರದು, ನಿಲ್ಲಲ್ಲ ಟೆಂಪ್ರೇಚರ್ ಹಾಡು ಇವರನ್ನು ನೋಡಿ ಬರದಂತೆ ಕಾಣಿಸುತ್ತೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ನಿಮ್ಮ ಈ ಪೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುವುದು ಗ್ಯಾರಂಟಿ ಎಂದು ಕೆಲವರು ಕಮೆಂಟ್​ ಮಾಡಿದ್ಧಾರೆ.

ನಾ ಸಾಮಿ ರಂಗ ಸಿನಿಮಾ ಈಗಾಗಲೇ ಬಹಳಷ್ಟು ಹೈಪ್ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಅಲ್ಲರಿ ನರೇಶ್, ರಾಜ್ ತರುಣ್, ಮಿರ್ನ ಮೆನನ್, ರುಕ್ಸಾರ್ ದಿಲ್ಲಾನ್ ಕೂಡ ನಟಿಸಿದ್ದಾರೆ. ಜನರು ಸಿನಿಮಾ ರಿಲೀಸ್‌ಗೆ ಕಾತುರದಿಂದ ಕಾಯುತ್ತಿದ್ದಾರೆ. ಆಶಿಕಾ ರಂಗನಾಥ್​ ನಟನೆಯ ಎರಡು ಚಿತ್ರಗಳ ಶೂಟಿಂಗ್​ ಪ್ರಗತಿಯಲ್ಲಿದ್ದು, O2 ಮತ್ತು ಗತವೈಭವ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net