More

    19 ರನ್​ ನೀಡಿ 7 ವಿಕೆಟ್​ ಪಡೆದ ಆರ್​ಸಿಬಿ ಮಾಜಿ​ ಆಟಗಾರ; ಎಸ್​ಆರ್​ಎಚ್​ಗೆ ಹೆಚ್ಚಿದ ತೋಳ್ಬಲ

    ನವದೆಹಲಿ: 17ನೇ ಆವೃತ್ತಿಯ ಐಪಿಎಲ್​ಗೆ ಈಗಾಗಲೇ ಸಿದ್ಧತೆಗಳು ಭರದಿಂದ ಆರಂಭಗೊಂಡಿದ್ದು, ರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಬ್ಯುಸಿ ಆಗಿರುವ ಆಟಗಾರರು ಐಪಿಎಲ್​ನಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ತಾವು ಈ ಹಿಂದೆ ಗೇಟ್​ಪಾಸ್​ ಪಡೆದ ಆಟಗಾರರು ತಂಡದ ನಿರ್ಧಾರ ತಪ್ಪು ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ತಮ್ಮ ವೈಯಕ್ತಿಕ ಪ್ರದರ್ಶನವನ್ನು ನೀಡುತ್ತಿದ್ದಾರೆ.

    2023ರ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆದ ಐಪಿಎಲ್​ ಮಿನಿ ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಕೆಲವರನ್ನು ಬಾರೀ ಮೊತ್ತಕ್ಕೆ ಖರೀದಿಸಿದರೆ ಹಲವರನ್ನು ಮೂಲಬೆಲೆಗೆ ಖರೀದಿಸಿದ್ದಾರೆ. ಅದೇ ರೀತಿ ಆರ್​ಸಿಬಿಯಿಂದ ಬಿಡುಗಡೆಗೊಂಡು ಎಸ್​ಆರ್​ಎಚ್​ ಸೇರಿದ್ದ ವನಿಂದು ಹಸರಂಗಾ ತಮ್ಮ ಉತ್ತಮ ಪ್ರದರ್ಶನದ ಮೂಲಕ ಮಾಜಿ ತಂಡದ ನಿರ್ಧಾರಕ್ಕೆ ತಿರುಗೇಟು ನೀಡಿದ್ದಾರೆ.

    ಗುರುವಾರ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ವನಿಂದು ಹಸರಂಗ ಅದ್ಭುತ ಬೌಲಿಂಗ್ ಮಾಡಿದರು. ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ಅಪಾಯಕಾರಿ ಎಸೆತಗಳ ಮೂಲಕ ಖೆಡ್ಡಾ ತೋಡಿದರು. ಪರಿಣಾಮ ಜಿಂಬಾಬ್ವೆ ತಂಡ 23 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು.

    ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ಹಿಟ್​ಮ್ಯಾನ್​ ​

    ಮಳೆ ಬಾಧಿತ ಈ ಪಂದ್ಯದಲ್ಲಿ ಜಿಂಬಾಬ್ವೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡವು ಉತ್ತಮ ಆರಂಭವನ್ನು ಹೊಂದಿತ್ತು ಮತ್ತು ಇಬ್ಬರೂ ಆರಂಭಿಕರು ಮೊದಲ ವಿಕೆಟ್‌ಗೆ 43 ರನ್ ಸೇರಿಸಿದರು. ಇದಾದ ಬಳಿಕ ಇಡೀ ತಂಡ 100 ರನ್‌ಗಳ ಅಂತರದಲ್ಲಿ ವಿಕೆಟ್‌ಗಳ ಪತನ ಆರಂಭವಾಯಿತು. 48 ರನ್ ಗಳಿಸಿದ್ದಾಗ ವನಿಂದು ಮೊದಲ 4 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು.

    ಈ ಪಂದ್ಯದಲ್ಲಿ ಹಸರಂಗ 5.5 ಓವರ್ ಬೌಲ್ ಮಾಡಿ 1 ಮೇಡನ್ ಓವರ್ ಬೌಲ್ ಮಾಡಿ 19 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಐಪಿಎಲ್​ನಲ್ಲಿ ತನ್ನನ್ನು ತಂಡದಿಂದ ಕೈಬಿಟ್ಟ ಆರ್​ಸಿಬಿಗೆ ತಕ್ಕ ತಿರುಗೇಟು ನೀಡಿದರು. ಗಾಯದ ನಂತರ ವಾಪಸಾದ ಹಸರಂಗ ಅವರು ಅದ್ಬುತವಾಗಿ ಬೌಲಿಂಗ್ ಮಾಡಿ ಗಮನ ಸೆಳೆದರು ಮತ್ತು ಸನ್​​​ರೈಸರ್ಸ್‌ ಹೈದರಾಬಾದ್ ತಂಡದ ಬಲವನ್ನು ಹೆಚ್ಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts