

ಕೌಲಾಲಂಪುರ: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯ(ASEAN Summit) ಹೊರತಾಗಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರನ್ನು ಸೋಮವಾರ (ಅ.27) ಭೇಟಿಯಾದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, ಇಂದು ಬೆಳಿಗ್ಗೆ ಕೌಲಾಲಂಪುರದಲ್ಲಿ ರೊಬಿಯೊರನ್ನು ಭೇಟಿಯಾಗಲು ಸಂತೋಷವಾಯಿತು. ಅಲ್ಲದೆ, ನಮ್ಮ ದ್ವಿಪಕ್ಷೀಯ ಸಂಬಂಧಗಳು ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ನಡೆದ ಚರ್ಚೆಯನ್ನು ಶ್ಲಾಘಿಸಿದ್ದಾರೆ.
ಅಮೆರಿಕ ಸಂಕಗಳ ಬಗ್ಗೆ ಕಳೆದ ವಾರ ಮಾತನಾಡಿದ್ದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಪ್ರಗತಿಯಲ್ಲಿವೆ. ಅಲ್ಲದೆ, ಭಾರತವು ತನ್ನ ತಲೆಗೆ ಇಟ್ಟರು ತರಾತುರಿಯಲ್ಲಿ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ನಾವು ಅಮೆರಿಕ ಜೊತೆ ಮಾತನಾಡುತ್ತಿದ್ದೇವೆ. ಆದರೆ ನಾವು ಆತುರದಿಂದ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ಅಲ್ಲದೆ, ನಮ್ಮ ತಲೆಗೆ ಬಂದೂಕು ಇಟ್ಟರು ಅವಸಾರದಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಗೋಯಲ್ ಕಳೆದ ವಾರ ಜರ್ಮನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಭಾರತವು ಕುತೂಹಲಕಾರಿಯಾಗಿ, ವ್ಯಾಪಾರ ಅಸಮತೋಲನ ಮತ್ತು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ನಿರ್ಧಾರವನ್ನು ಉಲ್ಲೇಖಿಸಿ ಅಮೆರಿಕ ಭಾರತದ ಮೇಲೆ ಶೇ. 50 ರಷ್ಟು ಸುಂಕವನ್ನು ವಿಧಿಸಿದೆ. ಆರಂಭದಲ್ಲಿ, ಇದು ಶೇ. 25 ರಷ್ಟು ಸುಂಕವನ್ನು ವಿಧಿಸಿತ್ತು. ಆದರೆ ನಂತರ ಹೆಚ್ಚುವರಿ ಶೇ. 25 ರಷ್ಟು ಸುಂಕವನ್ನು ಘೋಷಿಸಿತು. ಭಾರತವು ಸುಂಕಗಳನ್ನು ಟೀಕಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವಾರು ಕೇಂದ್ರ ಸಚಿವರು ದೇಶದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.
ಜೈಶಂಕರ್ರೊಂದಿಗಿನ ಭೇಟಿಗೂ ಮುನ್ನ, ರುಬಿಯೊ, ಭಾರತದೊಂದಿಗೆ ತನ್ನ ಸಂಬಂಧವನ್ನು ಸುಧಾರಿಸುವ ಗುರಿಯನ್ನು ಅಮೆರಿಕ ಹೊಂದಿದೆ. ಆದರೆ ಭಾರತದೊಂದಿಗಿನ ಸಂಬಂಧಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಪಾಕಿಸ್ತಾನದೊಂದಿಗಿನ ಅಮೆರಿಕದ ಸಂಬಂಧಗಳ ಬಗ್ಗೆ ಭಾರತವು ಸ್ಪಷ್ಟ ಕಾರಣಗಳಿಗಾಗಿ ಕಾಳಜಿ ವಹಿಸುತ್ತದೆ. ಆದರೆ ವಾಷಿಂಗ್ಟನ್ ಹಲವಾರು ವಿಭಿನ್ನ ದೇಶಗಳೊಂದಿಗೆ ಸಂಬಂಧವನ್ನು ಹೊಂದಿರಬೇಕು ಎಂಬುದನ್ನು ಭಾರತ ಅರ್ಥಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜತಾಂತ್ರಿಕತೆ ಮತ್ತು ಆ ರೀತಿಯ ವಿಷಯಗಳಿಗೆ ಬಂದಾಗ ಭಾರತೀಯರು ತುಂಬಾ ಪ್ರಬುದ್ಧರು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನಮಗೆ ಸಂಬಂಧವಿಲ್ಲದ ದೇಶಗಳೊಂದಿಗೆ ಅವರು ಕೆಲವು ಸಂಬಂಧಗಳನ್ನು ಹೊಂದಿದ್ದಾರೆ. ಆದ್ದರಿಂದ, ಇದು ಪ್ರಬುದ್ಧ, ಪ್ರಾಯೋಗಿಕ ವಿದೇಶಾಂಗ ನೀತಿಯ ಭಾಗವಾಗಿದೆ ಎಂದು ರೊಬಿಯೊ ಹೇಳಿದರು. ನಾವು ಪಾಕಿಸ್ತಾನದೊಂದಿಗೆ ಮಾಡುತ್ತಿರುವ ಯಾವುದೇ ಕೆಲಸವು ಭಾರತದೊಂದಿಗಿನ ನಮ್ಮ ಸಂಬಂಧ ಅಥವಾ ಸ್ನೇಹವನ್ನು ಹಾಳುಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ರೊಬಿಯೊ ತಿಳಿಸಿದ್ದಾರೆ. (ಏಜೆನ್ಸೀಸ್)