ಸೋತಾಗ ಮಾತ್ರ ಇವಿಎಂಗಳಲ್ಲಿ ದೋಷ ಕಾಣುತ್ತದೆ; Asaduddin Owaisi ಹೀಗೆಳಿದ್ದೇಕೆ?

Untitled-design-2024-10-09T170413.689
Published on: 

ನವದೆಹಲಿ: ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಇವಿಎಂಗಳನ್ನು ದೂಷಿಸುತ್ತಿರುವ ಕಾಂಗ್ರೆಸ್ ಅನ್ನು ಬುಧವಾರ(ಅಕ್ಟೋಬರ್​​ 9) ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi ) ಟೀಕಿಸಿದ್ದಾರೆ. ಕಾಂಗ್ರೆಸ್​​ಗೆ ಸೋತಾಗ ಮಾತ್ರ ಇವಿಎಂಗಳಲ್ಲಿ ದೋಷ ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಇವಿಎಂಗಳನ್ನು ದೂಷಿಸುವುದು ತುಂಬಾ ಸುಲಭ. ನೀವು ಗೆದ್ದರೆ ಇವಿಎಂ ಒಳ್ಳೆಯದು ಅದೆ ನೀವು ಸೋತರೆ ಕೆಟ್ಟದು. ಹಲವು ಪ್ರತಿಕೂಲ ಅಂಶಗಳನ್ನು ಗಮನಿಸಿದರೆ ಈ ರಾಜ್ಯದಲ್ಲಿ ಬಿಜೆಪಿ ಚುನಾವಣೆಯಲ್ಲಿ ಸೋಲಬೇಕಿತ್ತು ಎಂಬುದು ಅವರ ಅಭಿಪ್ರಾಯ ಎಂದು ಒವೈಸಿ ತಿಳಿಸಿದಾಗಿ ಎಎನ್​ಐ ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷವು 10 ವರ್ಷಗಳ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆಯಬೇಕಾಗಿತ್ತು. ಹರಿಯಾಣದಲ್ಲಿ ಕಾಂಗ್ರೆಸ್​​ ಲಾಭ ಮಾಡಿಕೊಳ್ಳುತ್ತಿಲ್ಲ. ಬಿಜೆಪಿ ಗೆಲುವಿಗೆ ಕಾಂಗ್ರೆಸ್‌ನ ಆಂತರಿಕ ಕಲಹಗಳೇ ಕಾರಣ. ಆದರೆ ಅವರ ಆಂತರಿಕ ಭಿನ್ನಾಭಿಪ್ರಾಯದಿಂದ ಬಿಜೆಪಿಗೆ ಲಾಭವಾಗಿದೆ ಎಂದು ತೋರುತ್ತದೆ. ನೀವು ಚುನಾವಣಾ ಕದನದಲ್ಲಿ ಬಿಜೆಪಿಗೆ ಸ್ವಲ್ಪ ತೆರೆದುಕೊಂಡರೆ ಅವರು ಅದರ ಲಾಭ ಪಡೆಯುತ್ತಾರೆ ಅವರು ಹೇಳಿದರು.

2024ರ ಸಂಸತ್ ಚುನಾವಣೆಯ ನಂತರ ಬಿಜೆಪಿಯ ಯಶಸ್ಸಿಗೆ ದ್ವೇಷದ ಕಾರಣ ಎಂದು ಹೇಳುವವರು ತಪ್ಪು ಎಂದು ನಾನು ಹೇಳಿದ್ದೆ. ಅದು ನಿಜವಲ್ಲ, ಹಾಗಾದರೆ ಬಿಜೆಪಿಯ ಯಶಸ್ಸಿಗೆ ಯಾರು ಹೊಣೆ? ನೀವು (ಕಾಂಗ್ರೆಸ್) ಪ್ರಮುಖ ಪ್ರತಿಪಕ್ಷವಾಗಿದ್ದು ಬಿಜೆಪಿಯನ್ನು ಸೋಲಿಸಲು ಸುವರ್ಣಾವಕಾಶವಿದೆ. ಆದರೆ ನೀವು ಅದನ್ನು ಮಾಡಲು ವಿಫಲರಾಗಿದ್ದೀರಿ ಎಂದು ಒವೈಸಿ ಹೇಳಿದರು. ಚುನಾವಣಾ ಫಲಿತಾಂಶಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳಿವೆ ಎಂದು ಹೇಳಿದೆ. (ಏಜೆನ್ಸೀಸ್​​)