

ಹೈದರಾಬಾದ್: ದೇವಸ್ಥಾನದ ಆವರಣದಲ್ಲಿ ಹಿಂದೂಗಳನ್ನು ಮಾತ್ರ ನೇಮಿಸುವ ಕುರಿತು ತಿರುಪತಿ ದೇವಸ್ಥಾನದ ನೂತನ ಅಧ್ಯಕ್ಷರ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಶನಿವಾರ(ನವೆಂಬರ್ 2) ಪ್ರತಿಕ್ರಿಯಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷರು ತಿರುಮಲದಲ್ಲಿ ಹಿಂದೂಗಳಿಗೆ ಮಾತ್ರ ಸಿಬ್ಬಂದಿ ನೀತಿಯನ್ನು ಘೋಷಿಸಿದ್ದರೆ. ಆದರೆ ಕೇಂದ್ರದ ಎನ್ಡಿಎ ಸರ್ಕಾರವು ಮುಸ್ಲಿಮೇತರರನ್ನು ವಕ್ಫ್ ಬೋರ್ಡ್ಗಳಿಗೆ ಸೇರಿಸಲು ಬಯಸಿದೆ ಎಂದು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ಟಿಟಿಡಿ ಮಂಡಳಿಯ (ತಿರುಮಲ ತಿರುಪತಿ ದೇವಸ್ಥಾನಗಳು) 24 ಸದಸ್ಯರಲ್ಲಿ ಒಬ್ಬ ಕೂಡ ಹಿಂದೂಯೇತರ ಸದಸ್ಯರಿಲ್ಲ. ಟಿಟಿಡಿಯ ನೂತನ ಅಧ್ಯಕ್ಷರು ಅಲ್ಲಿ ಕೆಲಸ ಮಾಡುವವರು ಹಿಂದೂಗಳಾಗಿರಬೇಕು ಎಂದು ಹೇಳುತ್ತಾರೆ. ನಾವು ಅದನ್ನು ವಿರೋಧಿಸುವುದಿಲ್ಲ, ಆದರೆ ಕೇಂದ್ರದ ವಕ್ಫ್ ಕೌನ್ಸಿಲ್ನಲ್ಲಿ 2 ಮುಸ್ಲಿಮೇತರ ಸದಸ್ಯರು ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರದ ಪ್ರಸ್ತಾವಿತ ವಕ್ಫ್ ಮಸೂದೆಯಲ್ಲಿ ಹೇಳುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿದರು.
ಟಿಟಿಡಿ ಹಿಂದೂ ಧರ್ಮದ ಮಂಡಳಿ ಮತ್ತು ವಕ್ಫ್ ಬೋರ್ಡ್ ಮುಸ್ಲಿಂ ಧರ್ಮಕ್ಕೆ ಸಮಾನತೆ ಇರಬೇಕು. ಟಿಟಿಡಿಯ ಟ್ರಸ್ಟಿಗಳು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದಾದರೆ ಮುಸ್ಲಿಮೇತರ ಸದಸ್ಯರು ವಕ್ಫ್ ಮಂಡಳಿಯಲ್ಲಿ ಹೇಗೆ ಇರುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಹಿಂದೂ ಆಗಿರಬೇಕು, ಇದು ನನ್ನ ಮೊದಲ ಪ್ರಯತ್ನ. ಇದರಲ್ಲಿ ಹಲವು ಸಮಸ್ಯೆಗಳಿವೆ ನಾವು ಅದನ್ನು ಪರಿಶೀಲಿಸಬೇಕು ಎಂದು ಅಧ್ಯಕ್ಷರಾದ ನಂತರ ಬಿ.ಆರ್.ನಾಯ್ಡು ಹೇಳಿದ್ದರು. (ಏಜೆನ್ಸೀಸ್)