ತಿರುಚಿರಾಪಳ್ಳಿಯಲ್ಲಿ 1.716 ಕೆ.ಜಿ ಚಿನ್ನದ ನಾಣ್ಯ ಪತ್ತೆ: ನಾಣ್ಯಗಳ ಮೇಲೆ ಅರೇಬಿಕ್​ ಲಿಪಿ

gold coins
Published on

ತಿರುಚಿರಾಪಳ್ಳಿ: ಇಲ್ಲಿನ ತಿರುವನಾಯ್ಕವಾಲ್​ನ ಜಂಬುಕೇಶ್ವರ ದೇವಸ್ಥಾನದ ಬಳಿ ಮಣ್ಣನ್ನು ಅಗೆಯುವಾಗ 1.716 ಕೆ.ಜಿ. ತೂಕದ 505 ಚಿನ್ನ ನಾಣ್ಯಗಳು ಪತ್ತೆಯಾಗಿವೆ.

ಬುಧವಾರದಂದು ನೆಲ ಅಗೆಯುವ ಸಮಯದಲ್ಲಿ ನಾಣ್ಯಗಳು ಪತ್ತೆಯಾಗಿರುವುದು ವರದಿಯಾಗಿದೆ. 504 ಸಣ್ಣ ನಾಣ್ಯಗಳು ಮತ್ತು ಒಂದು ದೊಡ್ಡ ನಾಣ್ಯ ಪತ್ತೆಯಾಗಿದೆ ಎನ್ನಲಾಗಿದೆ. ನಾಣ್ಯಗಳ ಮೇಲೆ ಅರೇಬಿಕ್​ ಲಿಪಿಯ ಅಕ್ಷರವಿರುವುದರಿಂದಾಗಿ ಇದು ಕ್ರಿ.ಶ 1000-1200ರ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ.

ನಾಣ್ಯಗಳನ್ನು ಮತ್ತು ಅವು ಪತ್ತೆಯಾದ ಜಾಗವನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಪೊಲೀಸರಿಗೆ ಹಸ್ತಾಂತರಿಸಿದೆ. ಹೆಚ್ಚಿನ ತನಿಖೆಗಾಗಿ ನಾಣ್ಯಗಳನ್ನು ಖಜಾನೆಯಲ್ಲಿಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net