

ಮುಂಬೈ: ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಸಿದ ಆರೋಪದ ಮೇಲೆ ಬಂಧಿತನಾದ ಆರ್ಯನ್ ಖಾನ್ಗೆ "ವಿಚಾರಣಾಧೀನ ಕೈದಿ ಎನ್956' ಎಂಬ ಸಂಖ್ಯೆ ನೀಡಲಾಗಿದ್ದು, ಗುರುವಾರ ಆರ್ಥರ್ ರೋಡ್ ಜೈಲ್ನ ಬ್ಯಾರಕ್ಗೆ ಸ್ಥಳಾಂತರಿಸಲಾಗಿದೆ.
ಹೈಕೋರ್ಟ್ ಆದೇಶ ಪ್ರಕಾರ ಮತ್ತು ನಿಯಮಾನುಸಾರ ಕೈದಿಗಳಿಗೆ ವಾರಕ್ಕೆ ಎರಡು ಸಲ ಅವರ ಕುಟುಂಬದವರೊಡನೆ ಮಾತುಕತೆ ಅವಕಾಶ ನೀಡಬೇಕು. ಇದರಂತೆ, ಆರ್ಯನ್ 10 ನಿಮಿಷ ತಂದೆ ಶಾರುಖ್ ಖಾನ್ ಮತ್ತು ತಾಯಿ ಗೌರಿ ಜತೆಗೆ ಮಾತನಾಡಿದ್ದ. ಇದರ ಬೆನ್ನಿಗೆ ಆತನಿಗೆ 4,500 ರೂಪಾಯಿ ಮನಿ ಆರ್ಡರ್ ಕೂಡ ತಲುಪಿದೆ. ಆದಾಗ್ಯೂ, ಆರ್ಯನ್ಗೆ ಜೈಲಿನ ಆಹಾರವನ್ನೇ ಕೊಡಲಾಗುತ್ತಿದೆ. ಮನೆಯ ಅಥವಾ ಹೊರಗಿನ ಆಹಾರವನ್ನು ನೀಡಲಾಗುತ್ತಿಲ್ಲ. ಇದಕ್ಕೆ ಕೋರ್ಟ್ನ ಅನುಮತಿ ಬೇಕು ಎಂದು ಜೈಲ್ ಸುಪರಿಂಟೆಂಡೆಂಟ್ ನಿತಿನ್ ವಯಚಾಲ್ ತಿಳಿಸಿದ್ದಾರೆ.
ಜಾಮೀನು ಅರ್ಜಿ ತಿರಸ್ಕೃತ: ಆರ್ಯನ್ ಜಾಮೀನು ಅರ್ಜಿ ಗುರುವಾರ ನಾಲ್ಕನೇ ಬಾರಿ ತಿರಸತಗೊಂಡಿದೆ. ಮುಂಬೈ ಸೆಷನ್ಸ್ ಕೋರ್ಟ್ ತೀರ್ಪನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದೆ. ಈಗಾಗಲೇ ಆರ್ಯನ್ 12 ದಿನಗಳಿಂದ ಜೈಲಿನಲ್ಲೇ ಇದ್ದು, ಕೋರ್ಟ್ಗೆ ರಜೆ ಇರುವ ಕಾರಣ ಇನ್ನೂ ನಾಲ್ಕೆ$ದು ದಿನದ ಸೆರೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆರ್ಯನ್ಗೆ ಕೋವಿಡ್&19 ಟೆಸ್ಟ್ ಮಾಡಿಸಲಾಗಿದ್ದು ಲಿತಾಂಶ ನೆಗೆಟಿವ್ ಬಂದ ಕಾರಣ ಜೈಲಿನ ಸಾಮಾನ್ಯ ಬ್ಯಾರೆಕ್ಗೆ ಸ್ಥಳಾಂತರಿಸಲಾಗಿದೆ.
ವಿದೇಶಿ ನಂಟು?
ಆರ್ಯನ್ ಖಾನ್, ಅರ್ಬಾಝ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೆ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದ ವಿದೇಶಿ ನಂಟು ಇರುವ ಬಗ್ಗೆ ಶಂಕೆ ಇದೆ. ಆರ್ಯನ್ ಖಾನ್ ಕಳೆದ ಕೆಲವು ವರ್ಷಗಳಿಂದ ಡ್ರಗ್ಸ್ ಕಾಯಂ ಗ್ರಾಹಕನಾಗಿದ್ದ. ಹೀಗಾಗಿ ವಿದೇಶಾಂಗ ಸಚಿವಾಲಯದ ನೆರವು ಕೋರಲಾಗಿದೆ ಎಂದು ಎನ್ಸಿಬಿಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಹೇಳಿದ್ದಾರೆ.