ಸರ್ಕಾರಗಳನ್ನು ಉರುಳಿಸಲು ಬಿಜೆಪಿಯಿಂದ 6,300 ಕೋಟಿ ರೂ.

Aravind Kejriwal 11 Feb 20
Published on

ನವದೆಹಲಿ: ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿ 6,300 ಕೋಟಿ ರೂ. ಖರ್ಚು ಮಾಡಿದೆ. ಇದನ್ನು ಖರ್ಚು ಮಾಡಿರದಿದ್ದರೆ ಆಹಾರ ಪದಾರ್ಥಗಳ ಮೇಲೆ ಜಿಎಸ್​ಟಿ ವಿಧಿಸಬೇಕಿರಲಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಜಿಎಸ್​ಟಿಯಿಂದ ವರ್ಷಕ್ಕೆ 7,500 ಕೋಟಿ ಆದಾಯ ಸಂಗ್ರಹಿಸಲಿರುವ ಕೇಂದ್ರ ಸರ್ಕಾರ ಪ್ರತಿಪಕ್ಷ ಸರ್ಕಾರಗಳನ್ನು ಉರುಳಿಸಲು ಈ ಹಣವನ್ನು ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.

ಕೇಜ್ರಿವಾಲ್, ಹಿಮಂತ ಟ್ವಿಟರ್ ಸಮರ: ಕಳಪೆ ಫಲಿತಾಂಶದಿಂದ ಅಸ್ಸಾಂನಲ್ಲಿ ಕೆಲ ಶಾಲೆಗಳನ್ನು ಮುಚ್ಚಿರುವ ಸಂಬಂಧ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಅಸ್ಸಾಂನ ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವಿಟರ್ ಸಮರ ತಾರಕಕ್ಕೇರಿದೆ. ಅಸ್ಸಾಂನಲ್ಲಿ ಕೆಲವೊಂದು ಶಾಲೆಗಳನ್ನು ಮುಚ್ಚಲಾಗಿದೆ ಎಂಬ ಸುದ್ದಿಯ ಲಿಂಕ್ ಅನ್ನು ಕೇಜ್ರೀವಾಲ್ ಶೇರ್ ಮಾಡಿ, ಶಾಲೆಗಳನ್ನು ಮುಚ್ಚುವುದು ಪರಿಹಾರವಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಶರ್ಮಾ ಸರಣಿ ಟ್ವೀಟ್​ಗಳಲ್ಲಿ , ‘ನಿಮ್ಮ ಅಜ್ಞಾನ ನೋವು ತಂದಿದೆ. ಅಸ್ಸಾಂ ದೆಹಲಿಗಿಂತ 50 ಪಟ್ಟು ದೊಡ್ಡದಾಗಿದೆ. 44,521 ಸರ್ಕಾರಿ ಶಾಲೆಗಳಿದ್ದು, ಸುಮಾರು 65 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net