ಕೇಜ್ರಿವಾಲ್ ಜಾಮೀನು ವಿಚಾರಣೆ: ಇಮ್ರಾನ್ ಖಾನ್​ಗೆ ಆದಂತೆ ನಮ್ಮ ದೇಶದಲ್ಲಾಗದು ಎಂದಿದ್ದೇಕೆ ವಕೀಲ ಸಿಂಘ್ವಿ?

kejriwal
Published on

ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ(ಜು.17) ನಡೆಯಿತು. ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ಪ್ರಸ್ತಾಪಿಸಿದರು.

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬಿಡುಗಡೆ ಮೂರು ದಿನಗಳ ಹಿಂದೆ ಆಗಿತ್ತು. ಆದರೆ ಮತ್ತೊಂದು ಪ್ರಕರಣದಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಕೇಜ್ರಿವಾಲ್​ ಅವರ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಆದರೆ ನಮ್ಮ ದೇಶ ಹಾಗಲ್ಲ, ಇಲ್ಲಿ ಕಾನೂನು ಉತ್ತಮವಾಗಿದೆ ಎಂದು ಸಿಂಘ್ವಿ ಹೇಳಿದರು.

ಕೇಜ್ರಿವಾಲ್ ಬಂಧನದ ವಿರುದ್ಧದ ಅರ್ಜಿಯ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದ ನಂತರ ಜಾಮೀನು ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಧೀಶೆ ನೀನಾ ಬನ್ಸಾಲ್ ಕೃಷ್ಣ ಹೇಳಿದರು. ಜುಲೈ 29ರಂದು ಅವರ ಜಾಮೀನು ಕುರಿತ ನಿರ್ಧಾರ ಹೊರಬೀಳಬಹುದು. ಬುಧವಾರ ನ್ಯಾಯಾಲಯದಲ್ಲಿ ಉಭಯ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net